ಪುತ್ತೂರು: ದರ್ಬೆ ಅಂಕಲ್ ಸ್ವೀಟ್ಸ್ ಬಳಿ ಅಯ್ಮನ್ ತಾಜಾ ಮಟನ್ ಹಾಗೂ ಫಿಶ್ ಸ್ಟಾಲ್ ಮಾ.11ರಂದು ಉದ್ಘಾಟನೆಗೊಂಡಿತು.
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರುರವರು ನೂತನ ಕೇಂದ್ರವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಪುತ್ತೂರಿನ ದರ್ಬೆಯ ಹೃದಯ ಭಾಗದಲ್ಲಿ ಆಧುನಿಕತೆಯ ವ್ಯವಸ್ಥೆಯನ್ನು ಮೈಗೂಡಿಸಿಕೊಂಡು ಮಾಂಸಪ್ರಿಯರಿಗೋಸ್ಕರ ಪೌಸ್ಟಿಕ ಆಹಾರವೆನಿಸಿದ ಮಟನ್ ಹಾಗೂ ಮೀನು ಮಾರಾಟ ಕೇಂದ್ರ ಉದ್ಘಾಟನೆಗೊಂಡಿರುವುದು ಖುಶಿಯ ವಿಚಾರ. ಮಿತದರಲ್ಲಿ, ಶುಚಿತ್ವವನ್ನು ಕಾಪಾಡಿಕೊಂಡು ವ್ಯವಹಾರಿಸಿದ್ದಲ್ಲಿ ಯಶಸ್ವಿಯಾಗಬಲ್ಲುದು ಎಂದರು.
ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಅಧ್ಯಕ್ಷ ಹಾಗೂ ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷ ರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ಮಾಜಿ ಶಾಸಕ ಸಂಜೀವ ಮಠಂದೂರು ರವರ ದಿವ್ಯ ಹಸ್ತದಿಂದ ಉದ್ಘಾಟಿಸಿದ ಪ್ರತಿಯೊಂದು ಮಳಿಗೆಗಳು ಅಭಿವೃದ್ಧಿ ಹೊಂದಿವೆ. ದರ್ಬೆ ಈ ಭಾಗದಲ್ಲಿ ತರಕಾರಿ ಮಳಿಗೆ, ಕೋಳಿ ಸೆಂಟರ್ ಇದ್ದು ಇದರ ಜೊತೆಗೆ ಮಟನ್, ಮೀನು ಮಾರಾಟ ಕೇಂದ್ರವು ಒಂದೇ ಕಡೆ ದೊರಕುತ್ತಿರುವುದು ಗ್ರಾಹಕರಿಗೆ ಖುಶಿಯ ವಿಚಾರ. ವ್ಯವಹಾರದಲ್ಲಿ ಕರ್ತವ್ಯನಿಷ್ಠೆ ಹಾಗೂ ಪ್ರಾಮಾಣಿಕತೆ ಯನ್ನು ರೂಢಿಸಿಕೊಂಡಾಗ ದೇವರ ಅನುಗ್ರಹವಿದೆ ಎಂದರು.
ಪುತ್ತೂರು ಜಮಾಅತ್ ಸಮಿತಿಯ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಹಾಗೂ ನೂತನ ಮಳಿಗೆಯ ಕಟ್ಟಡದ ಮಾಲಕ ಪ್ರವೀಣ್ ಕುಮಾರ್ ರವರು ಮಾತನಾಡಿ, ಇಂತಹ ಮಳಿಗೆಗಳು ಬೆಳೆಯುತ್ತಿರುವ ಪುತ್ತೂರಿಗೆ ಪೂರಕವಾಗಿವೆ. ಮಳಿಗೆಯು ಉತ್ತಮ ವ್ಯವಹಾರ ನಿರ್ವಹಣೆಯೊಂದಿಗೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.
ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಆರ್ಶದ್ ದರ್ಬೆ, ದರ್ಬೆ ಮಹಮದೀಯ ಮಸೀದಿ ಕೋಶಾಧಿಕಾರಿ ಪಿ.ಬಿ ಹಸೈನಾರ್, ದರ್ಬೆ ಮಸೀದಿ ಅಧ್ಯಕ್ಷ
ಅಬ್ದುಲ್ ರಹಿಮಾನ್ ಅಝಾದ್, ಹೊಟೇಲ್ ರಾಯಲ್ ಕ್ರೌನ್ ನ ಅಬ್ದುಲ್ ಅಝೀಝ್, ಆಸಿಕುದ್ದೀನ್ ಕುಂಬ್ರ, ಅದ್ರು ಪರ್ಪುಂಜ, ಕರಾವಳಿ ಚಿಕನ್ ಸೆಂಟರ್ ಕರೀಮ್ ಸೂರಿಬೈಲು, ಬಪ್ಪಳಿಗೆ ಮಸೀದಿ ಮಾಜ ಅಧ್ಯಕ್ಷ ಬಿ.ಎಚ್ ಮಹಮದ್ ಹಾಜಿ, ಅಂಕಲ್ ಸ್ವೀಟ್ಸ್ ನ ಕುಶಾಲಪ್ಪ ಗೌಡ, ಪಿ.ಬಿ ಮಹಮದ್ ಪರ್ಪುಂಜ, ಯಾಹ್ಯಾ ದರ್ಬೆ, ರಫೀಕ್ ದರ್ಬೆ, ನೂಜಿ ಖಾದರ್, ಇಬ್ರಾಹಿಂ ಸಾಗರ್ ಸಹಿತ ಹಲವರು ಆಗಮಿಸಿ ಶುಭ ಹಾರೈಸಿದರು. ಅಮರ್ ಅಕ್ಬರ್ ಅಂತೋಣಿ ಕ್ರಿಕೆಟ್ ಟೂರ್ನಿಯ ಸಂಯೋಜಕ ರಝಾಕ್ ಬಿ.ಎಚ್ ಕಾರ್ಯಕ್ರಮ ನಿರೂಪಿಸಿದರು.
ಕೂರ್ನಡ್ಕ ಜಮಾಅತ್ ಖಾಝಿ, ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಶೈಖುನಾ ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಂ ಬಂಬ್ರಾಣ ಹಾಗೂ ಸೈಯದ್ ಮುಹಮ್ಮದ್ ಅಶ್ರಫ್ ತಂಞಳ್ ಅವರು ದುವಾಗೈದು ಶುಭಾ ಹಾರೈಸಿದರು.
2 ಕಿ.ಮೀ ಹೋಮ್ ಡೆಲಿವರಿ..
ಇಲ್ಲಿ ಪ್ರತಿದಿನ ತಾಜಾ ಮಾಂಸ, ತಾಜಾ ಹಸಿ ಮೀನು ಗ್ರಾಹಕರಿಗೆ ದೊರೆಯುತ್ತಿದ್ದು ಗ್ರಾಹಕರು ಪ್ರೋತ್ಸಾಹಿಸಿ ಸಹಕರಿಸಬೇಕು ಜೊತೆಗೆ 2 ಕಿ.ಮೀ ವ್ಯಾಪ್ತಿಯೊಳಗಡೆ ಹೋಮ್ ಡೆಲಿವರಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 7204331355 ನಂಬರಿಗೆ ಸಂಪರ್ಕಿಸಬಹುದು ಎಂದು ಮಳಿಗೆಯ ಮಾಲಕರಾದ ಅಶ್ರಫ್ ಪಿ.ಬಿ ಪರ್ಪುಂಜ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.