ಪುತ್ತೂರು: ಅರಿಯಡ್ಕ ಏಳ್ನಾಡುಗುತ್ತು ಕುಟುಂಬದ ನವೀಕೃತ ತರವಾಡು ಮನೆಯ ಗೃಹ ಪ್ರವೇಶ, ಧರ್ಮದೈವ ಪಿಲಿಭೂತದ ನೂತನ ದೈವಸ್ಥಾನ ಮತ್ತು ದೊಂಪದ ಬಲಿ ಉತ್ಸವ ನಡೆಯುವಲ್ಲಿ ನವೀಖೃತಗೊಂಡ ಉತ್ಸವ ಕಟ್ಟೆಗಳು ಪಿಲಿ ಮತ್ತು ಪಿಲಿಕೊಟ್ಯಗಳ ಹಾಗೂ ಖಂಡಿಗದಲ್ಲಿ ನಿರ್ಮಿಸಿದ ಗುಳಿಗನ ಕಟ್ಟೆಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಧರ್ಮ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ಏ.21ರಿಂದ 24ರತನಕ ನಡೆಯಲಿದೆ. ಈ ಸಮಾರಂಭದ ಅಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಮಾ.10ರಂದು ಅಅರಿಯಡ್ಕ ತರವಾಡು ಮನೆಯ ಮಂಟಮೆಯಲ್ಲಿ ಜರಗಿತು.
ಪುತ್ತೂರಿನ ಹಿರಿಯ ಉದ್ಯಮಿ, ಕುಟುಂಬದ ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾೖಕ್ ರವರು ಅಮಂತ್ರನ ಪತ್ರವನ್ನು ಬಿಡುಗಡೆಗೊಳಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಎ.ಕೃಷ್ಣ ರೈ ಪನ್ನೆಗುತ್ತು, ಅರಿಯಡ್ಕ ಸುಬ್ಬಯ್ಯ ಶೆಟ್ಟಿ, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಬಿ.ಸತೀಶ್ ರೈ ಬಂದಡ್ಕ, ಸುರೇಶ್ ಆಳ್ವ ಸಾಂತ್ಯ, ರವೀಂದ್ರ ರೈ ಮರವೂರು, ಎ.ಕೆ.ರೈ, ಅರಿಯಡ್ಕ, ಡಾ.ಮೋಹನ್ದಾಸ್ ರೈ ಕನಕತೋಡಿ, ಡಾ.ದೀಪಕ್ ರೈ ಮುಂಡಾಳ, ಕರುಣಾಕರ ರೈ ಅತ್ರೆಜಾಲು, ವಿನೋದ್ ಶೆಟ್ಟಿ ಅರಿಯಡ್ಕ, ಬಾಲಚಂದ್ರ ರೈ ಬೆದ್ರುಮಾರು, ಅರುಣ ರೈ ಬಿಜಳ, ಶ್ರೀರಾಂ ಪಕ್ಕಳ ಕರ್ನೂರು, ವಿನಯಾ ಆರ್ ಶೆಟ್ಟಿ ಸಾಂತ್ಯ, ಚಂದ್ರಶೇಖರ್ ರೈ, ಅಶ್ವಿನ್ ರೈ ಅರಿಯಡ್ಕ, ಬ್ರಿಜೇಶ್ ಶೆಟ್ಟಿ ಅರಿಯಡ್ಕ, ಅಗಲ್ಪಾಡಿ, ಪ್ರೇಮಾ ಶೇನವ ಅರಿಯಡ್ಕ, ವಿವೇಕ್ ರೈ ಗೊಳ್ತಿಲ ಮತ್ತಿತರರು ಉಪಸ್ಥಿತರಿದ್ದರು.