ಕಾಣಿಯೂರು: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಎನ್. ಎಸ್. ಎಸ್ ಶಿಬಿರ ಪೂರಕವಾದ ಕೆಲಸ ಮಾಡುತ್ತದೆ. ಶಿಬಿರದಲ್ಲಿ ಕಲಿತ ಶಿಸ್ತು, ಸಮಯ ಪ್ರಜ್ಞೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಸ್ಪಂದಿಸುವ ಮನಸ್ಸು ನೀವಾಗಬೇಕು ಎಂದು ಪುತ್ತೂರು ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಹೇಳಿದರು.
ಅವರು ಅಕ್ಷಯ ಕಾಲೇಜು ಪುತ್ತೂರು ಇದರ ನೇತೃತ್ವದಲ್ಲಿ ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೀವನದಲ್ಲಿ ಸ್ಪಷ್ಟ ಗುರಿ, ಆತ್ಮವಿಶ್ವಾಸ ಇದ್ದರೆ ಸೋಲನ್ನೂ ಕೂಡ ಗೆಲುವನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಸಮೃದ್ಧ ಭಾರತದ ನಿರ್ಮಾಣದಲ್ಲಿ ಯುವಜನರ ಪಾತ್ರ ಅಪಾರ ಎಂದರು. ಕಾಣಿಯೂರು ಕ್ಲಸ್ಟರ್ ಸಿ. ಆರ್. ಪಿ ಯಶೋದ ಎ, ಬೊಬ್ಬೆಕೇರಿ ಸ.ಹಿ.ಪ್ರಾ.ಶಾಲಾ ಮುಖ್ಯಗುರು ಶಶಿಕಲಾ, ಪುತ್ತೂರು ಅಕ್ಷಯ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ ಬೊಬ್ಬೆಕೇರಿ ಸ. ಹಿ. ಪ್ರಾ. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ತೀರ್ಥಕುಮಾರ್ ಪೈಕ, ಬೊಬ್ಬೆಕೇರಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ,ಪುತ್ತೂರು ಅಕ್ಷಯ ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಕಾಲೇಜಿನ ಉಪನ್ಯಾಸಕರು,ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಕಿಶೋರ್ ಕುಮಾರ್ ರೈ, ಉಪನ್ಯಾಸಕಿ , ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹ ಯೋಜನಾಧಿಕಾರಿ ಮೇಘಶ್ರೀ, ಪುಣ್ಚತ್ತಾರು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಮಾಳ, ಬೊಬ್ಬೆಕೇರಿ ಶಾಲಾ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಜಯರಾಮ ಗೌಡ ನಾವೂರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.ವಿದ್ಯಾರ್ಥಿನಿ ಸ್ಮಿತಾ ಪ್ರಾರ್ಥಿಸಿದರು. ಘಟಕದ ನಾಯಕ ಜೀವನ್ ಸ್ವಾಗತಿಸಿ, ಘಟಕದ ನಾಯಕಿ ನವಮಿ ವಂದಿಸಿದರು. ವಿದ್ಯಾರ್ಥಿ ಹಸ್ತಿಕ್ ಕಾರ್ಯಕ್ರಮ ನಿರೂಪಿಸಿದರು.
ಬೊಬ್ಬೆಕೇರಿ ಶಾಲಾ ಅಭಿವೃದ್ಧಿಯಲ್ಲಿ ಕೈಜೋಡಿಸಲಾಗುವುದು
ಅಕ್ಷಯ ಕಾಲೇಜು ವತಿಯಿಂದ ನಡೆದ ಏಳು ದಿನಗಳ ಎನ್ ಎಸ್ ಎಸ್ ಶಿಬಿರದಲ್ಲಿ ಇಲ್ಲಿನ ಜನರ, ಶಾಲಾ ಪ್ರೀತಿಯನ್ನು ಗಳಿಸಿದ್ದೇವೆ. ಎಲ್ಲರ ಸಹಕಾರದಿಂದ ಶಿಬಿರವು ಯಶಸ್ವಿಯಾಗಿ ನಡೆಯಲು ಸಾಧ್ಯವಾಯಿತು. ಶತಮಾನವನ್ನು ಕಂಡಿರುವ ಬೊಬ್ಬೆಕೇರಿ ಸ.ಹಿ.ಪ್ರಾ. ಶಾಲೆಯ ಅಭಿವೃದ್ಧಿಯಲ್ಲಿ ಮುಂದಿನ ದಿನಗಳಲ್ಲಿ ಕೈ ಜೋಡಿಸಲಾಗುವುದು.
ಜಯಂತ್ ನಡುಬೈಲು
ಅಧ್ಯಕ್ಷರು, ಅಕ್ಷಯ ಕಾಲೇಜು ಪುತ್ತೂರು