ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ನಡೆಯುವ ವರ್ಷಾವಧಿ ಮಹಾಕಾಳಿ ಮೆಚ್ಚಿಯು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಶ್ರೀ ದೇವಿಗೆ ಮಲ್ಲಿಗೆ ಸಮರ್ಪಣೆ, ಕುಂಕುಮಾರ್ಚನೆ ಮೊದಲಾದ ಸೇವೆಗಳು ಭಕ್ತಾದಿಗಳಿಂದ ನಡೆಯಿತು. ಮಹಾಕಾಳಿ ದೇವಾಲಯದ ಮುಂಭಾಗದಲ್ಲಿ ಎಣ್ಣೆ ಬೂಳ್ಯ ನೀಡುವ ವಿವಿಧ ವಿಧಾನದಿಂದ ಮೊದಲುಗೊಂಡು ಸಂತೆ ಮಜಲಿನಲ್ಲಿ ಮುಡಿಏರಿಸಿಕೊಳ್ಳುವ ಮೂಲಕ ನೇಮೋತ್ಸವದ ವಿಧಿ ವಿಧಾನಗಳು ಪರವ ಮನೆತನದವರಿಂದ ನಡೆಯಿತು.
ಈ ಸಂದರ್ಭ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್, ಸದಸ್ಯರಾದ ಹರೀಶ್ ಉಪಾಧ್ಯಾಯ, ಸೋಮನಾಥ, ಡಾ. ರಮ್ಯ ರಾಜಾರಾಮ್, ಅನಿತಾ ಕೇಶವ ಗೌಡ, ಗೋಪಾಲಕೃಷ್ಣ ರೈ ಬೆಳ್ಳಿಪ್ಪಾಡಿ, ಬಿ. ದೇವದಾಸ್ ರೈ, ಜಿ. ಕೃಷ್ಣ ರಾವ್ ಅರ್ತಿಲ, ಎಂ. ವೆಂಕಪ್ಪ ಪೂಜಾರಿ, ಮಾಜಿ ಶಾಸಕ ಸಂಜೀವ ಮಟಂದೂರು, ಗುರು ಬೆಳದಿಂಗಳು ಫೌಂಡೇಶನ್‌ನ ಪದ್ಮರಾಜ್ ಆರ್., ಹಿಂದೂ ಪರ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಪ್ರಮುಖರಾದ ಡಾ. ರಾಜಾರಾಮ್ ಕೆ.ಬಿ., ಕರುಣಾಕರ ಸುವರ್ಣ, ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿ, ಡಾ. ನಿರಂಜನ್ ರೈ, ಡಾ. ಗೋವಿಂದ ಪ್ರಸಾದ್ ಕಜೆ, ಸುಂದರ ಗೌಡ, ರಾಮಚಂದ್ರ ಮಣಿಯಾಣಿ, ಶಿಲ್ಪಾ ಆಚಾರ್ಯ, ಚಿದಾನಂದ ನಾಯಕ್, ಜಯಂತ ಪೊರೋಳಿ, ಎನ್ ಗೋಪಾಲ ಹೆಗ್ಡೆ , ನಾಗೇಶ್ ಪ್ರಭು, ಕೈಲಾರ್ ರಾಜಗೋಪಾಲ ಭಟ್, ದೇವಾಲಯದ ಕಾರ್ಯವಿರ್ವಹಣಾಧಿಕಾರಿ ಚೆನ್ನಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್, ಪದ್ಮನಾಭ, ದಿವಾಕರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕೃತಿ ಕೈಲಾರ್ ಮತ್ತು ಬಳಗದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.