ಪುತ್ತೂರು: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಕ್ಕಾಗಿ 2023ರ ಆ.14ರಂದು ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿ ರಸ್ತೆ ಬಂದ್ ಮಾಡಿ ಕಾನೂನು ಉಲ್ಲಂಘನೆ ಮಾಡಿರುವುದಾಗಿ ಪೊಲೀಸರು ದಾಖಲಿಸಿಕೊಂಡಿದ್ದ ಸುಮೋಟೋ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಗೆ ಹಾಜರಾಗಿ ಕಾರಣ ನೀಡುವಂತೆ ಅರುಣ್ ಕುಮಾರ್ ಪುತ್ತಿಲ ಸಹಿತ ನಾಲ್ವರಿಗೆ ನೋಟೀಸ್ ಜಾರಿ ಮಾಡಲಾಗಿದೆ.
2023ರ ಆ.14 ರಂದು ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ವತಿಯಿಂದ ಸೌಜನ್ಯ ಪ್ರಕರಣದಲ್ಲಿ ನ್ಯಾಯಾಕ್ಕಾಗಿ ಪ್ರತಿಭಟನೆ ನಡೆದಿತ್ತು. ಪುತ್ತೂರು ಗಾಂಧಿ ಪ್ರತಿಮೆ ಬಳಿ ನ್ಯಾಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ವೇಳೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಮತ್ತು ರಸ್ತೆ ಬಂದ್ ಮಾಡಲಾಗಿದೆ ಎಂದು ಪೊಲೀಸರು ಅರುಣ್ ಕುಮಾರ್ ಪುತ್ತಿಲ, ಪ್ರಸನ್ನ ಮಾರ್ತ, ಉಮೇಶ್ ಕೋಡಿಬೈಲು ಮತ್ತು ಅನಿಲ್ ತೆಂಕಿಲ ಅವರ ವಿರುದ್ಧ 87/2023 ಕಲಂ 188,290 ಐಪಿಸಿ 109 ಕೆಪಿ ಅಡಿ ಪ್ರಕರಣ ದಾಖಲು ಮಾಡಿದ್ದರು. ಇದೀಗ ಅವರಿಗೆ ಕಾರಣ ನೀಡಿ ನಗರ ಪೊಲಿಸ್ ಠಾಣಾಧಿಕಾರಿಯವರ ಮುಂದೆ ಹಾಜರಾಗುವುಂತೆ ನೋಟೀಸ್ ಜಾರಿ ಮಾಡಲಾಗಿದೆ.
ಸುದ್ದಿ ಮಾದ್ಯಮದವರ ಕೋರಿಯಂತೆ ನಾವು ರಸ್ತೆ ತಡೆ ಮಾಡದೆ ಪ್ರತಿಭಟನೆ ಮಾಡಿದ್ದೆವೆ. ಎಲ್ಲೂ ಯಾರಿಗೂ ತೊಂದರೆ ಆಗಿಲ್ಲ. ಕಾನೂನು ಉಲ್ಲಂಘನೆಯನ್ನೂ ಮಾಡಿಲ್ಲ ಪ್ರತಿಭಟನೆಯಲ್ಲಿ ಬಲತ್ಕಾರದ ಬಂದ್ ನಡೆದಿಲ್ಲ. ರಸ್ತೆ ತಡೆಯು ನಡೆದಿಲ್ಲ ಆದರೂ ಪೊಲೀಸರು ನಮ್ಮ ಮೇಲೆ ಸುಮೋಟೋ ಕೇಸ್ ದಾಖಲಿಸಿದ್ದಾರೆ ಎಂದು ಪ್ರಸನ್ನ ಕುಮಾರ್ ಮಾರ್ತ ತಿಳಿಸಿದ್ದಾರೆ.