ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಮಂಗಳೂರು ಹಾಗೂ ಮಂಗಳೂರು ವಿ.ವಿ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಮಾ.18ರಂದು ಮಂಗಳೂರಿನಲ್ಲಿ ಜರಗಿದ ಮಂಗಳೂರು ವಿ.ವಿ ಅಂತರ್-ಕಾಲೇಜು ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿಗೆ ತೃತೀಯ ಸ್ಥಾನ ಲಭಿಸಿದೆ.
ಮಹಿಳೆಯರ ವಿಭಾಗದಲ್ಲಿ ಶಿರ್ವ ಬ್ಲಾಸಮ್ ಮ್ಯಾನ್ಸನ್ ಸೆಲೆಸ್ತಿಯನ್ ಡಿ’ಸೋಜ ಟ್ರೋಫಿಯಲ್ಲಿ ಒಟ್ಟು 30 ಅಂಕಗಳು, ಪುರುಷರ ವಿಭಾಗದ ಪ್ರೊ|ರಿಚರ್ಡ್ ರೆಬೆಲ್ಲೋ ರೋಲಿಂಗ್ ಟ್ರೋಫಿಯಲ್ಲಿ ಒಟ್ಟು 40 ಅಂಕಗಳನ್ನು ಗಳಿಸಿದ್ದು, ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಫಿಲೋಮಿನಾ ಕಾಲೇಜು ತೃತೀಯ ಸ್ಥಾನವನ್ನು ಗಳಿಸಿರುತ್ತದೆ. ಕೂಟದಲ್ಲಿನ 81 ಕೆ.ಜಿ ವಿಭಾಗದಲ್ಲಿ ದ್ವಿತೀಯ ಬಿಕಾಂನ ಶಬರೀಶ್ ರೈರವರಿಗೆ ಚಿನ್ನದ ಪದಕ, 64 ಕೆ.ಜಿ ವಿಭಾಗದಲ್ಲಿ ಪ್ರಥಮ ಎಂಕಾಂನ ಬ್ಯೂಲಾ ಪಿ.ಟಿರವರಿಗೆ ಚಿನ್ನದ ಪದಕ, 89 ಕೆ.ಜಿ ವಿಭಾಗದಲ್ಲಿ ಅಂತಿಮ ಬಿಕಾಂ ವಿಭಾಗದ ಅಭಿ ರಾಮಚಂದ್ರರವರಿಗೆ ಚಿನ್ನದ ಪದಕ, 67 ಕೆ.ಜಿ ವಿಭಾಗದಲ್ಲಿ ಅಂತಿಮ ಬಿಕಾಂನ ಮೊಹಮದ್ ಮುನಾಫ್ ರವರಿಗೆ ಬೆಳ್ಳಿ ಪದಕ, 96 ಕೆ.ಜಿ ವಿಭಾಗದಲ್ಲಿ ದ್ವಿತೀಯ ಬಿಕಾಂನ ಯತೀಶ್ ರವರಿಗೆ ಬೆಳ್ಳಿ ಪದಕ, 109 ಕೆ.ಜಿ ವಿಭಾಗದಲ್ಲಿ ಪ್ರಥಮ ಬಿಎ ವಿಭಾಗದಲ್ಲಿ ರಂಜಿತ್ ರವರಿಗೆ ಬೆಳ್ಳಿ ಪದಕ, 55 ಕೆ.ಜಿ ವಿಭಾಗದಲ್ಲಿ ದ್ವಿತೀಯ ಬಿಎ ವಿಭಾಗದ ಸುರಕ್ಷಿತ್ ರವರಿಗೆ ಕಂಚಿನ ಪದಕ, 49 ಕೆ.ಜಿ ವಿಭಾಗದಲ್ಲಿ ಪ್ರಥಮ ಬಿಎಸ್ಸಿಯ ಚೈತ್ರಿಕಾರವರಿಗೆ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಡಾ|ಎಲ್ಯಾಸ್ ಪಿಂಟೊ ಹಾಗೂ ವೈಟ್ ಲಿಪ್ಟಿಂಗ್ ತರಬೇತುದಾರ ಪುಷ್ಪರಾಜ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆ ಕಾಲೇಜಿಗೆ ಅಭಿಮಾನದ ವಿಷಯವಾಗಿದೆ ಎಂದು ಕಾಲೇಜಿನ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್, ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೊ, ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಪಂದನಾರವರಿಂದ ಹೊಸ ಕೂಟ ದಾಖಲೆ..
45 ಕೆ.ಜಿ ವಿಭಾಗದಲ್ಲಿ ಪ್ರಥಮ ಬಿಎಸ್ಸಿಯ ಸ್ಪಂದನಾರವರು ಸ್ನ್ಯಾಚ್ ನಲ್ಲಿ 55ಕೆ.ಜಿ, ಕ್ಲೀನ್ ಆಂಡ್ ಜರ್ಕ್ ನಲ್ಲಿ 72ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗಳಿಸಿ ಕೂಟದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಅಲ್ಲದೆ ಸ್ಪಂದನಾರವರು ಕೂಟದಲ್ಲಿ ಬೆಸ್ಟ್ ಲಿಪ್ಟರ್ ಎಂಬ ಬಿರುದನ್ನು ಕೂಡ ಗಳಿಸಿಕೊಂಡಿದ್ದಾರೆ. ಮೊದಲು ಸ್ಪಂದನಾರವರು ತ್ರಿಶೂರ್ ನಲ್ಲಿ ನಡೆದ ಖೇಲೊ ಇಂಡಿಯಾ ವೈಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಪುಣಚ ನಿವಾಸಿ ದೇವಪ್ಪ ಹಾಗೂ ಜಯಶ್ರೀರವರ ಪುತ್ರಿಯಾಗಿರುವ ಸ್ಪಂದನಾರವರು ತಮ್ಮ ಪ್ರೌಢಶಿಕ್ಷಣವನ್ನು ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದ್ದರು.