ಪುತ್ತೂರು:ನೆಟ್ಟಣಿಗೆ ಮುಡ್ನೂರು ಗ್ರಾಮದ ಅರಿಪ್ಪಳದಲ್ಲಿ ನವೀಕೃತ ಶ್ರೀವಿಷ್ಣುಮೂರ್ತಿ ದೈವಸ್ಥಾನದಲ್ಲಿ ದೈವಗಳ ಪುನಃ ಪ್ರತಿಷ್ಠಾ ಕಲಶೋತ್ಸವ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಿತು.
ಮಾ.26ರಂದು ಬೆಳಿಗ್ಗೆ ಹಸಿರುವಾಣಿ ಹೊರೆಕಾಣಿಕೆ ನಡೆದು ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಅಘೋರ ಹೋಮ, ಪ್ರೇತಾವಾಹನೆ, ಬಾಧಾಮೂರ್ತಿಗಳ ಆವಾಹನೆ, ಉಚ್ಚಾಟನೆ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ ನಡೆಯಿತು. ಮಾ.27ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶಪೂಜೆ, ಮೇಷ ಲಗ್ನದ ಶುಭಮುಹೂರ್ತದಲ್ಲಿ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, ನಡೆಯಿತು. ಸಂಜೆ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ಅನ್ನಸಂತರ್ಪಣೆ ನಡೆಯಿತು. ಮಾ.27ರಂದು ರಾಧಾ ಶೇಷಪ್ಪ ರೈ ಮತ್ತು ಮನೆಯವರು ಬರೆಮೇಲು, ಪಟ್ಟೆ ಹಾಗೂ ಚೆನ್ನಮ್ಮ ಮತ್ತು ಮನೆಯವರು ಅರಿಪ್ಪಳ ಇವರಿಂದ ಸೇವಾರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. ಅರಿಪ್ಪಳ ಶ್ರೀವಿಷ್ಣುಮೂರ್ತಿ ಸೇವಾ ಸಮಿತಿಯ ಗೌರವಾಧ್ಯಕ್ಷ ಶ್ರೀಕೃಷ್ಣ ಭಟ್ ಮುಂಡ್ಯ, ಅಧ್ಯಕ್ಷ ಧರ್ಮೇಂದ್ರ ಕೆ., ಹಾಗೂ ಪದಾಧಿಕಾರಿಗಳು ಸದಸ್ಯರು, ಶ್ರೀವಿಷ್ಣುಮೂರ್ತಿ ಪುನಃ ಪ್ರತಿಷ್ಠಾ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಅಧ್ಯಕ್ಷ ನವೀನ್ ಕುಮಾರ್ ಕುಕ್ಕುಡೇಲು ಎಸ್ಟೇಟ್ ಹಾಗೂ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಮಾ.28: ದೈವದ ಭಂಡಾರ ಏರುವುದು, ಕುಳಿಚ್ಚಾಟ
ಮಾ.29 ಬಯಲು ಕೋಲ, ಗುಳಿಗ ದೈವದ ಕೋಲ
ಮಾ.28ರಂದು ಸಂಜೆ ದೈವದ ಭಂಡಾರ ಏರುವುದು, ತೊಡಂಞಲ್, ಭಜನೆ, ಅನ್ನಸಂತರ್ಪಣೆ, ಕುಳಿಚ್ಚಾಟ ನಡೆಯಲಿದೆ. ಮಾ.29ರಂದು ಬೆಳಿಗ್ಗೆ ಶ್ರೀವಿಷ್ಣುಮೂರ್ತಿ ದೈವದ ಬಯಲು ಕೋಲ, ಪ್ರಸಾದ ಸ್ವೀಕಾರ, ಅನ್ನಪ್ರಸಾದ ಬಳಿಕ ಗುಳಿಗ ದೈವದ ಕೋಲ ನಡೆಯಲಿದೆ.