ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರ ನವತಿ ಕಾರ್ಯಕ್ರಮದ ಅವಲೋಕನಾ ಸಭೆ

0

ಪುತ್ತೂರು: ಫೆ.24 ರಂದು ಪುತ್ತೂರು ಬಂಟರ ಭವನದಲ್ಲಿ ಜರಗಿದ ಅಜಾತ ಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರವರ 90 ರ ಸಂಭ್ರಮಾಚರಣೆ ” ನವತಿ” ಕಾರ್ಯಕ್ರಮದ ಅವಲೋಕನ ಸಭೆಯು ಮಾ.23 ರಂದು ದರ್ಬೆ ಪ್ರಶಾಂತ ಮಹಲಿನಲ್ಲಿ ನಡೆಯಿತು.


ಸಂಭ್ರಮಾಚರಣೆಯ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಸ್ವಾಗತಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತ್ಞತೆ ಸಲ್ಲಿಸಿದರು. ನಂತರ ಸಮಿತಿಯ ಕಾರ್ಯದರ್ಶಿ ಜಗಜ್ಜೀವನದಾಸ್ ರೈ ಮಾತನಾಡಿ, ಕಳೆದ ಒಂದು ವರ್ಷದಿಂದ ಎಲ್ಲರನ್ನೂ ಸೇರಿಸಿಕೊಂಡು ಸಭೆ ನಡೆಸಿ ಕಾರ್ಯಕ್ರಮವನ್ನು ರೂಪಿಸಿ, ಚಿಕ್ಕಪ್ಪ ನಾಯ್ಕರ ನವತಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲಾಯಿತು ಎಂದರು.

ಸಭೆಯಲ್ಲಿ ಸಾವಿರಕ್ಕಿಂತಲೂ ಅಧಿಕ ಮಂದಿ ಸೇರಿ ಚಿಕ್ಕಪ್ಪ ನಾಯ್ಕರ ಮೇಲಿನ ಗೌರವಾದರಗಳ ಹೆಚ್ಚಿಸಿದರು. ಬೆಳಿಗ್ಗೆ ಪಟ್ಲ ಸತೀಶ ಶೆಟ್ಟಿಯವರ ಗಾನ ವೈಭವ ನಡೆದರೆ ಸಭಾ ಕಾರ್ಯಕ್ರಮ ಸವಣೂರು ಸೀತಾರಾಮ ರೈ ಅಧ್ಯಕ್ಷತೆಯಲ್ಲಿ, ಸಮಿತಿಯ ಅಧ್ಯಕ್ಷ ಶಶಿಕುಮಾರ್ ರೈಬಾಲ್ಯೊಟ್ಟು, ಪ್ರಾಸ್ತಾವಿಕ ಮಾತುಗಳೊಂದಿಗೆ ಆರಂಭಗೊಂಡಿತು. ಮೂಡಬಿದ್ರೆಯ ಶಿಕ್ಷಣ ತಜ್ಞ ಮೋಹನ ಆಳ್ವ, ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮೊದಲಾದವರ ಅರ್ಥಪೂರ್ಣ ಮಾತುಗಳೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.

ನವತಿ ಸಂಭ್ರಮದ ನೆನಪಿಗಾಗಿ ಡಾ. ನರೇಂದ್ರ ರೈ ದೇರ್ಲರ ಸಂಪಾದಕತ್ವದಲ್ಲಿ, ಸದಸ್ಯರ ಸಹಕಾರದೊಂದಿಗೆ ತಯಾರಾದ ಸ್ಮರಣ ಸಂಚಿಕೆಯನ್ನು ಡಾ.ಮೋಹನ್ ಆಳ್ವರು ಬಿಡುಗಡೆಗೊಳಿಸಿದರು.
90 ವರ್ಷಗಳ ಸಾರ್ಥಕ ಜೀವನ ನಡೆಸಿದ ಚಿಕ್ಕಪ್ಪ ನಾಯ್ಕ್ ರವನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಬಂದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಎಲ್ಲರಿಗೂ ಕೃತಜ್ಞತೆಗಳು ಎನ್ನುವ ವರದಿಯನ್ನು ಮಂಡಿಸಿದರು.

ನಂತರ ಕೋಶಾಧಿಕಾರಿ ಜೈರಾಜ್ ಭಂಡಾರಿ ಜಮಾ- ಖರ್ಚಿನ ಲೆಕ್ಕವನ್ನು ಸಭೆಯ ಮುಂದಿಟ್ಟು ಪರಿಶೀಲಿಸಿ ಅನುಮೋದಿಸಲಾಯಿತು. ಉಳಿಕೆ ಹಣವನ್ನು ನವತಿ ಸಂಭ್ರಮದ ಸವಿನೆನಪಿಗಾಗಿ ನಿಧಿಯ ವಿನಿಯೋಗ ಹೇಗೆ ಮಾಡುವುದೆಂದು ಸಮಿತಿಯ ತೀರ್ಮಾನಕ್ಕಾಗಿ ಬಿಟ್ಟು ಅನುಮೋದಿಸಲಾಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ, ಮಾಸ್ ಸಂಸ್ಥೆಯ ಅಧ್ಯಕ್ಷರಾದ ನಿಟ್ಟಿನಲ್ಲಿ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿದ್ದ ಸದಸ್ಯರು ಕಾರ್ಯಕ್ರಮದ ಕುರಿತು ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಸಂಘಟಕರ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದರು. ನವತಿ ಸಂಭ್ರಮವನ್ನು ಸಂಭ್ರಮಿಸಿದ ನಾಯ್ಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಶುಭ ಹಾರೈಸಿದರು. ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈಗಳು ನವತಿ ಸಂಭ್ರಮದ ಕುರಿತು ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು. ಎಚ್. ಶ್ರೀಧರ ರೈ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here