ಉಪ್ಪಿನಂಗಡಿ: ಲಕ್ಷ್ಮೀನಗರ ನೀರಿನ ಸಮಸ್ಯೆಗೆ ಪರಿಹಾರ

0

ಉಪ್ಪಿನಂಗಡಿ: ಹಿರೇಬಂಡಾಡಿ- ರಾಮನಗರ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದರಿಂದ ಕುಡಿಯುವ ನೀರಿನ ಸಂಪರ್ಕ ಪೈಪ್‌ಗಳು ಹಾನಿಗೀಡಾಗಿದ್ದು, ಇದರಿಂದಾಗಿ ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯ ಲಕ್ಷ್ಮೀನಗರದ ಜನತಾ ಕಾಲನಿಯಲ್ಲಿ ಸುಮಾರು 100ಕ್ಕೂ ಅಧಿಕ ಮನೆಗಳಿಗೆ ಕಳೆದೆರಡು ದಿನಗಳಿಂದ ನೀರಿನ ಸಮಸ್ಯೆ ತಲೆದೋರಿದ್ದು, ಇದನ್ನು ಪರಿಹರಿಸುವಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಯಶಸ್ಸು ಕಂಡಿದೆ.
ಇಲ್ಲಿ ನೀರಿನ ಸಮಸ್ಯೆ ತಲೆದೋರಿದ್ದರಿಂದ ಇಲ್ಲಿನ ನಾಗರಿಕರು ಟ್ಯಾಂಕರ್‌ನಲ್ಲಾದರೂ ನಮಗೆ ನೀರು ಪೂರೈಕೆ ಮಾಡಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಆಗ ಗ್ರಾ.ಪಂ.ನವರು ಇಲ್ಲಿಯ ಪೈಪ್‌ಲೈನ್ ಸರಿಯಾಗುವವರೆಗೆ ಮಾನವೀಯ ನೆಲೆಯಲ್ಲಿ ನೀರು ಪೂರೈಕೆ ಮಾಡಲು ಸಾರ್ವಜನಿಕ ಸಾಮ್ಯದ ನಿಗಮ ಸಂಸ್ಥೆಯೊಂದಕ್ಕೆ ಮನವಿ ಮಾಡಿದರು. ಆ ಮನವಿಗೆ ಅವರು ಒಪ್ಪಿದ್ದು, ಇಲ್ಲಿನ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡಿದ್ದಾರೆ. ಇದರಿಂದಾಗಿ ಇಲ್ಲಿನವರ ನೀರಿನ ಸಮಸ್ಯೆ ಪರಿಹಾರವಾಗಿದೆ.

LEAVE A REPLY

Please enter your comment!
Please enter your name here