ಪುತ್ತೂರು: ಕಳೆದ 20 ವರುಷಗಳಿಂದ ವಿವಿಧ ರಾಜ್ಯಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಪ್ರಸಿದ್ಧಿ ಪಡೆದಿರುವ ಅಪೊಲೊ ಸರ್ಕಸ್ ಮಾ.31 ರಿಂದ ದರ್ಬೆ ಬಳಿಯ ಮುಕ್ರಂಪಾಡಿಯ ಹನುಮ ವಿಹಾರ ಮೈದಾನದಲ್ಲಿ ಆರಂಭಗೊಳ್ಳಲಿದೆ. ಪ್ರಥಮ ಪ್ರದರ್ಶನವು ಸಾಯಂಕಾಲ 4ಗಂಟೆಗೆ ನಡೆಯಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಮಣಿಪುರಿ, ನೇಪಾಳ, ಅಸಾಮಿ, ಡಾರ್ಜಿಲಿಂಗ್ ಸೇರಿದಂತೆ ಇನ್ನಿತರ ಕಡೆಗಳ ನೂರಕ್ಕಿಂತ ಅಧಿಕ ಮಹಿಳೆಯರು ಹಾಗೂ ಪುರುಷ ಕಲಾವಿಧರು ಈ ತಂಡದಲ್ಲಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಲರ್ ಲೈಟ್ಸ್ ನಲ್ಲಿ ವಿವಿಧ ಪ್ರದರ್ಶನಗಳು ಸುಮಾರು ಎರಡು ಗಂಟೆಗಳ ಕಾಲ ನಡೆಯಲಿದ್ದು, ಪ್ರತೀದಿನ ಮಧ್ಯಾಹ್ನ 1ಕ್ಕೆ, ಸಾಯಂಕಾಲ 4 ಹಾಗೂ 7 ಗಂಟೆಗೆ ಶೋ ನಡೆಯಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯೂ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.