ಪುತ್ತೂರು: ಭಾರತೀಯ ಭೂಸೇನೆಯಲ್ಲಿ ಎಸಿಪಿ ಹವಾಲ್ದಾರ್ ಆಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ ಜಯಕುಮಾರ್ ಪಿ ಕೆದಿಲ ರವರು ಮಾ.31ರಂದು ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ. ಪುತ್ತೂರು ತಾಲೂಕು ಕೊಡಿಪ್ಪಾಡಿ ಗ್ರಾಮದ ಪಲ್ಲತ್ತಾರು ಲಿಂಗಪ್ಪ ಪೂಜಾರಿ ಮತ್ತು ಕಮಲರವರ ಪುತ್ರರಾಗಿರುವ ಇವರು 1981 ನ.13ರಂದು ಜನಿಸಿದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಮುರ ಶಾಲೆಯಲ್ಲಿ , ಹೈಸ್ಕೂಲ್ ಶಿಕ್ಷಣವನ್ನು ಭಕ್ತಕೋಡಿ ಶಾಲೆಯಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನಲ್ಲಿ ಮುಗಿಸಿದರು. 2002 ಮಾ.13ರಂದು ಭಾರತೀಯ ಭೂಸೇನೆಯಲ್ಲಿ ಕರ್ತವ್ಯಕ್ಕೆ ಹಾಜರಾದರು. ಮಧ್ಯಪ್ರದೇಶದ ಭೂಪಾಲ್ ನಲ್ಲಿ ತರಬೇತಿ ಮುಗಿಸಿ, ಉತ್ತರಪ್ರದೇಶದ ಮೆರಾಟ್, ಜಮ್ಮು ಕಾಶ್ಮೀರ, ರಾಜಸ್ಥಾನ, ಹಿಮಾಚಲ ಪ್ರದೇಶ, ಪಂಜಾಬ್, ಅಸ್ಸಾಂ, ಮಧ್ಯಪ್ರದೇಶದ ಝಾನ್ಸಿ, ಹರಿಯಾಣಾ, ಸಿಕ್ಕಿಂ ನಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದುತ್ತಿದ್ದಾರೆ. ಜಯಕುಮಾರ್ ರವರು ಪತ್ನಿ ಸುಪ್ರೀತಾ, ಪುತ್ರ ಮಾ.ಸುಜೇಶ್ ರವರೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ.