ಪುತ್ತೂರು: ಕಿಡ್ನಿ, ಮೂತ್ರಂಗವ್ಯೂಹದ ಕಲ್ಲಿನ ಸಮಸ್ಯೆಗಳಿಂದ ಬಳಲುತ್ತಿರುವ ಹಲವಾರು ಜನರು ಅದರಿಂದ ಮುಕ್ತಿ ಪಡೆಯಲು ಹಾತೊರೆಯುತ್ತಿದ್ದಾರೆ. ಇದೀಗ ಯಾವುದೇ ಗಾಯಗಳಿಲ್ಲದೆ ಶಸ್ತ್ರಕ್ರಿಯೆಯ ಮೂಲಕ ಕಲ್ಲುಗಳನ್ನು ಹೊರತೆಗೆಯುವ ಅತ್ಯಾಧುನಿಕ ತಂತ್ರಜ್ಞಾನದ ತುಲಿಯಮ್ ಫೈಬರ್ ಲೇಸರ್ ಯಂತ್ರವನ್ನು ಪುತ್ತೂರಿನ ಬೊಳುವಾರಿನಲ್ಲಿರುವ ಪ್ರಗತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಆ ಮೂಲಕ ಈ ಭಾಗದ ಜನರಿಗೆ ಮತ್ತಷ್ಟು ವರದಾನವಾಗಿದೆ.
ಯುರೋಲಾಜಿಸ್ಟ್, ಆಂಡ್ರಾಲಜಿಸ್ಟ್, ಯುರೋ ಕ್ಯಾನ್ಸರ್ ತಜ್ಞರಾಗಿರುವ ಡಾ.ಅಭೀಷ್ ಹೆಗ್ಡೆಯವರು ಈಗಾಗಲೇ ಕಿಡ್ನಿ, ಮೂತ್ರಂಗವ್ಯೂಹದ ಯಶಸ್ವಿ ಶಸ್ತ್ರಕ್ರೀಯೆಯನ್ನು ನಡೆಸುವ ಮೂಲಕ ಹಾಗೂ ಚಿಕಿತ್ಸೆ ನೀಡುವ ಮೂಲಕ ಹಲವಾರು ರೋಗಿಗಳ ರೋಗ ಶಮನಗೊಳಿಸುವಲ್ಲಿ ಸಫಲರಾಗಿದ್ದಾರೆ. ಇದೀಗ ಅತ್ಯಾದುನಿಕ ತಂತ್ರಜ್ಞಾನದ ಫೈಬರ್ ಲೇಸರ್ ಯಂತ್ರವನ್ನು ಅಳವಡಿಸಲಾಗಿದ್ದು, ಕಿಡ್ನಿಯಲ್ಲಿ ಅಲ್ಲಲ್ಲಿ ಇರುವ ಕಲ್ಲುಗಳನ್ನು ಯಾವುದೇ ಗಾಯಗಳಿಲ್ಲದೆ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯಲಾಗುವುದು. ಶಸ್ತ್ರಚಿಕಿತ್ಸೆಗೊಳಗಾದ ವ್ಯಕ್ತಿಯೂ ಎರಡೇ ದಿನದಲ್ಲಿ ಕೆಲಸ ಮಾಡಬಹುದಾಗಿದೆ. ರಷ್ಯಾದಿಂದ ಅತ್ಯದುನಿಕ ತಂತ್ರಜ್ಞಾನದ ಈ ಯಂತ್ರವನ್ನು ತರಿಸಲಾಗಿದ್ದು, ಇದು ಪುತ್ತೂರಿನಲ್ಲಿ ಪ್ರಥಮವಾಗಿದೆ.
ಈ ತಂತ್ರಜ್ಞಾನವನ್ನು ಬಳಸಿಕೊಂಡು ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು ಪುತ್ತೂರಿನ ಜನತೆಗೆ ಮತ್ತಷ್ಟು ವರದಾನವಾಗಿದೆ. ಈಗಾಗಲೇ ಪ್ರಗತಿ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ ಕಿಡ್ನಿಯ, ಮೂತ್ರಕೋಶ ಹಾಗೂ ಮೂತ್ರಾಂಗವ್ಯೂಹದ ಎಲ್ಲಾ ತೊಂದರೆಗಳಿಗೆ ಕೀಹೋಲ್ ಆಪರೇಶನ್ ಹಾಗೂ ಲ್ಯಾಪ್ರಸ್ಕೋಪಿ ಮೂಲಕ ಚಿಕಿತ್ಸೆ ಮಾಡುವ ಸೌಲಭ್ಯ ಇದ್ದು, ಈ ತುಲಿಯಮ್ ಫೈಬರ್ ಲೇಸರ್ ಹಾಗು ಆರ್.ಐ.ಆರ್.ಎಸ್.(Retrograde Intrarenal Surgery) ನಿಂದಾಗಿ ರೋಗಿಗಳಿಗೆ ಯಾವುದೇ ಗಾಯಗಳಿಲ್ಲದೆ ಕಿಡ್ನಿಯ ಸರ್ಜರಿ ಕೂಡ ಮಾಡ ಬಹುದಾಗಿದೆ. ಹೊಸ ಯಂತ್ರದ ಕುರಿತಾಗಿ ಆಸ್ಪತ್ರೆಯ ಯುರೋಲಾಜಿಸ್ಟ್, ಆಂಡ್ರಾಲಜಿಸ್ಟ್, ಯುರೋ ಕ್ಯಾನ್ಸರ್ ತಜ್ಞರಾಗಿರುವ ಡಾ.ಅಭೀಷ್ ಹೆಗ್ಡೆಯವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯರು, ಹೃದ್ರೋಗ ತಜ್ಞರಾಗಿರುವ ಡಾ.ಯು. ಶ್ರೀಪತಿ ರಾವ್, ಮಹಿಳಾ ವೈದ್ಯರು ಹಾಗೂ ಆಯುರ್ವೇದ ತಜ್ಞರಾಗಿರುವ ಡಾ. ಸುಧಾ ಎಸ್.ರಾವ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.