ಪುತ್ತೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪುತ್ತೂರು ಅಂಚೆ ಇಲಾಖೆಯ ವತಿಯಿಂದ ಮತದಾನ ಜಾಗೃತಿ ಜಾಥಾ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಎ.3ರಂದು ಪುತ್ತೂರು ಪೇಟೆಯಲ್ಲಿ ನಡೆಯಿತು.
ಪ್ರಜಾಪ್ರಭುತ್ವದಲ್ಲಿ ನಿಮ್ಮ ಭಾಗವಹಿಸುವಿಕೆಯ ಮುದ್ರೆಯನ್ನು ಒತ್ತಿ ಎಂಬ ಧೈಯ ವಾಕ್ಯದೊಂದಿಗೆ ಖಚಿತ ಮತದಾನ ಮಾಡುವ ಕುರಿತು ವಿವಿಧ ಜಾಗೃತಿ ಭಿತ್ತಿ ಪತ್ರಗಳನ್ನು ಹಿಡಿದ ಅಂಚೆ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಪುತ್ತೂರು ಪ್ರಧಾನ ಅಂಚೆ ಕಚೇರಿಯಿಂದ ಹೊರಟು ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಚುನಾವಣೆಯ ನೋಡೆಲ್ ಆಗಿರುವ ಹನುಮ ರೆಡ್ಡಿಯವರು ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಅಲ್ಲಿಂದ ಮತ್ತೆ ಹೊರಟ ಜಾಗೃತಿ ಜಾಥ ಪುತ್ತೂರು ಬಸ್‌ನಿಲ್ದಾಣದ ಬಳಿಯಿಂದ ಅಂಚೆ ಇಲಾಖೆಗೆ ತೆರಳುವ ಮೂಲಕ ಸಮಾಪನಗೊಂಡಿತ್ತು. ಈ ಸಂದರ್ಭದಲ್ಲಿ ಅಂಚೆ ಇಲಾಖೆ ಪುತ್ತೂರು ವಿಭಾಗದ ಹಿರಿಯ ಅಧೀಕ್ಷಕ ಜಿ.ಹರೀಶ್, ಡೆಪ್ಯೂಟಿ ಸೂಪರಿಟೆಂಡೆಂಟ್ ಉಷಾ ಕೆ.ಆರ್, ಹೆಚ್ಚುವರಿ ಅಂಚೆ ಅಧೀಕ್ಷಕ ಚಂದ್ರ ನಾಯ್ಕ್, ಪೋಸ್ಟ್ ಮಾಸ್ಟರ್ ವಸಂತಿ, ಪುತ್ತೂರು ತಾ.ಪಂ ಸಹಾಯ ನಿರ್ದೇಶಕಿ ಶೈಲಜಾ ಭಟ್, ಭರತ್ ಸಹಿತ ಅಂಚೆ ಇಲಾಖೆಯ ನೌಕರರು ಉಪಸ್ಥಿತರಿದ್ದರು.