ಪುತ್ತೂರು: 1947ರ ಆ.15ರಂದು ಪರಕೀಯರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಂದರ್ಭವೇ ಹುಟ್ಟಿದ ಪುತ್ತೂರು ಕೊಂಬೆಟ್ಟು ನಿವಾಸಿ ಶ್ರೀಧರ್ ಅಡಿಗ (77ವ)ರವರು ಎ.7ರಂದು ಬೆಳಗ್ಗೆ ನಿಧನರಾದರು.
ಸ್ವಾತಂತ್ರ್ಯ ಸಿಗುವ ಸಂದರ್ಭವೇ ಹುಟ್ಟಿದ ಶ್ರೀಧರ್ ಅಡಿಗ ಅವರು ಕೇಂದ್ರದ ಜಿಯೋಲಜಿಕಲ್ ಡಿಪಾರ್ಟ್ಮೆಂಟ್ ಆಫ್ ಇಂಡಿಯಾದ ಇದರ ನಿರ್ದೇಶಕರಾಗಿ ನಿವೃತ್ತರಾಗಿದ್ದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಕೊಂಬೆಟ್ಟು ನಿವಾಸಿಯಾಗಿದ್ದ ಅವರು ವಯೋಸಹಜ ನಿಧನರಾದರು. ಮೃತರು ಪತ್ನಿ ಪ್ರೇಮ ಅಡಿಗ, ಸಿಂಗಾಪುರದಲ್ಲಿ ಗೋಲ್ಡ್ಮೈನ್ಸ್ ಬ್ಯಾಂಕಿಂಗ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಪುತ್ರ ಪ್ರಶಾಂತ್ ಕೆ ಎಸ್ ಅವರನ್ನು ಅಗಲಿದ್ದಾರೆ. ಎ.8ರಂದು ಮೃತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.