ಪುತ್ತೂರು: ಸವಣೂರು ಮಹಾ ಶಕ್ತಿ ಕೇಂದ್ರದ ಸವಣೂರು ಗ್ರಾಮದ ಮೊಗರು ಬೂತ್ ಸಂಖ್ಯೆ -66 ಇದರ ವತಿಯಿಂದ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನಾಚರಣೆಯನ್ನ ಬೂತ್ ಅಧ್ಯಕ್ಷ ಜಗದೀಶ್ ಇಡ್ಯಾಡಿರವರ ಮನೆಯಲ್ಲಿ ದ್ವಜ ಹಾರಿಸುವ ಮುಖಾಂತರ ಆಚರಿಸಲಾಯಿತು.
ಸುಳ್ಯ ಮಂಡಲ ಚುನಾವಣಾ ಉಸ್ತುವಾರಿ ಸಹ ಸಂಚಾಲಕ ದಿನೇಶ್ ಮೆದು ರವರು ಬಿಜೆಪಿ ನಡೆದು ಬಂದ ಹಾದಿ ಹಾಗೂ ಸಾಧನೆಗಳ ಬಗ್ಗೆ, ಪಕ್ಷಕ್ಕಾಗಿ ದುಡಿದ ಮಹಾನ್ ವ್ಯಕ್ತಿಗಳ ಬಗ್ಗೆ ವಿವರವಾಗಿ ತಿಳಿಸಿ, ಪಕ್ಷಕ್ಕಾಗಿ ಕಾರ್ಯಕರ್ತರು ಮಾಡಬೇಕಾದ ಕಾರ್ಯಗಳ ಬಗ್ಗೆ, ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ವಿವರಿಸಿದರು.
ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ತಾರಾನಾಥ ಕಾಯರ್ಗರವರು ಬೂತ್ ಮಟ್ಟದಲ್ಲಿ ನಡೆಯಬೇಕಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸುಳ್ಯ ಮಂಡಲ ಎಸ್. ಟಿ. ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಶಕ್ತಿ ಕೇಂದ್ರದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಚಂದ್ರಶೇಖರ ಮೆದು, ಮಿಥುನ್ ಅಗರಿ, ಮಹಾಬಲ ಪೆರಿಯಡ್ಕ, ಯೋಗೀಶ್ ಇಡ್ಯಾಡಿ, ಚಂದ್ರಶೇಖರ ಇಡ್ಯಾಡಿ, ಪ್ರಥಮ್ ಕಾಯರ್ಗ, ರಾಜೇಶ್ ಇಡ್ಯಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಮನೆ ಮನೆ ಭೇಟಿ ನೀಡಿ ಪ್ರಚಾರ ಕಾರ್ಯ ನಡೆಸಲಾಯಿತು.