ವಿಟ್ಲಮುಡ್ನೂರು ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಬಿಜೆಪಿಯ ನಕಲಿ ಹಿಂದುತ್ವದ ಬಣ್ಣ ಬಯಲಾಗುತ್ತಿದೆ: ಅಶೋಕ್ ರೈ


ಪುತ್ತೂರು: ಬಿಜೆಪಿಯವರ ನಕಲಿ ಹಿಂದುತ್ವದ ಬಣ್ಣ ಬಯಲಾಗುತ್ತಿದೆ, ಅಧಿಕಾರದ ಆಸೆಯಿಂದ ಹಲವಾರು ಮಂದಿ ನಕಲಿ ಹಿಂದುತ್ವದ ವಿಷ ಬೀಜಗಳನ್ನು ಸೃಷ್ಟಿ ಮಾಡಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಅವರೆಲ್ಲರನ್ನೂ ಮೂಲೆಗುಂಪು ಮಾಡಲಾಗಿದೆ. ಇನ್ನಾದರೂ ಜನ ಇವರ ನಾಟಕವನ್ನು ಅರಿತುಕೊಳ್ಳಬೇಕಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ವಿಟ್ಲ ಮುಡ್ನೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಎಲ್ಲರನ್ನೂ ಒಳಗೊಂಡ ಬಂಧುತ್ವದ ಹಿಂದುದ್ವವೇ ಕಾಂಗ್ರೆಸ್ ಹಿಂದುತ್ವವಾಗಿದೆ, ಕಾಂಗ್ರೆಸ್ ನವರಿಗೆ ಬಿಜೆಪಿಗರ ಹಿಂದುತ್ವದ ಪಾಠ ಅಗತ್ಯವಿಲ್ಲ. ಸಮಾಜದಲ್ಲಿ ಸಂಘರ್ಷವನ್ನು ಸೃಷ್ಟಿಸಿ, ಸುಳ್ಳು ಭಾಷಣ ಮಾಡಿ , ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವುದು ಬಿಜೆಪಿ ಸಂಸ್ಕೃತಿಯಾಗಿದೆ ಅವರಿಗೆ ಅಭಿವೃದ್ದಿ ಬೇಕಾಗಿಲ್ಲ ಎಂದು ಶಾಸಕರು ಹೇಳಿದರು.


ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಯನ್ನು ನಿಮಗೆ ತಲುಪಿಸಿ, ನುಡಿದಂತೆ ನಡೆದು ಇದೀಗ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದೇವೆ ಹರಸಿ ಎಂದು ಮನವಿ ಮಾಡಿದ ಶಾಸಕರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಜನ ನೆಮ್ಮದಿಯಿಂದ ಇರಲು ಸಾಧ್ಯ. ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ಹಣ ಎಲ್ಲರ ಮನೆ ಬೆಳಗಿಸಿದೆ.ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ಕುಟುಂಬಕ್ಕೆ ವಾರ್ಷಿಕ ಒಂದು ಲಕ್ಷ ಹಣ ನೀಡಲಿದ್ದೇವೆ ಎಂದು ಹೇಳಿದರು.
ದೇಶದ ಭದ್ರತೆಯ ಹಿತದೃಷ್ಟಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ನಮ್ಮ ದೇಶದ ಭೂಭಾಗವನ್ನು ಚೀನಾ ಅತಿಕ್ರಮಿಸಿದೆ ಆದರೆ ಅದನ್ನು ಪ್ರಶ್ನಿಸುವ ತಾಕತ್ತು ಕೇಂದ್ರ ಸರಕಾರಕಿಲ್ಲ, ತನ್ನ ಅಧಿಕಾರ ಅವಧಿಯಲ್ಲಿ ನಡೆದ ತಪ್ಪುಗಳನ್ನು ಮರೆ ಮಾಚುವ ಉದ್ದೇಶದಿಂದ ಬಿಜೆಪಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಮಾಡುತ್ತಿದ್ದು ಜನ ಪ್ರಭುದ್ದರಾಗಿದ್ದು ಮುಂದೆ ಅವರ ನಾಟ ನಡೆಯುವುದಿಲ್ಲ ಎಂದು ಹೇಳಿದರು.

ವಿಷ ಕಾರುತ್ತಿದ್ದವರು ಎಲ್ಲಿ ಹೋದರು?
ಪ್ರತೀ ಚುನಾವಣೆ ಬಂದಾಗ ಸಮಾಜದಲ್ಲಿ ಸಂಘರ್ಷ ಉಂಟು ಮಾಡುವ ಏಕೈಕ ಉದ್ದೇಶದಿಂದ ಧರ್ಮ ಧರ್ಮಗಳ ನಡುವೆ ವಿಷ ಕಾರುತ್ತಿದ್ದವರು ಎಲ್ಲಿ ಹೋದರು? ಎಲ್ಲರನ್ನೂ ಬಿಜೆಪಿ ಅಧಿಕಾರಕ್ಕಾಗಿ ಬಳಸಿ ಇದೀಗ ಎಲ್ಲಾ ವಿಷ ಬೀಜಗಳನ್ನು ಎಸೆದಿದ್ದಾರೆ. ಶಾಂತಿ , ಸಹಬಾಳ್ವೆಯನ್ನು ಬಯಸುವ ಜನತೆಗೆ ಕೋಮು ಸಂಘರ್ಷ ಅಗತ್ಯವಿಲ್ಲ ಎಂಬುದು ಬಿಜೆಪಿಗೆ ಮನದಟ್ಟಾಗಿದೆ. ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಏನೂ ಅಭಿವೃದ್ದಿ ಕೆಲಸಗಳನ್ನು ಮಾಡದ ಸಂಸದರು ಹೋದಲ್ಲಿ ಬಂದಲ್ಲಿ ಹಿಂದುತ್ವ ಹಿಂದುತ್ವ ಎಂದು ಹೇಳಿ ಜನರನ್ನು ಮರಳು ಮಾಡಿದ್ದು ಬಿಟ್ರೆ ಇನ್ನೇನು ಮಾಡಿಲ್ಲ ಎಂದು ಹೇಳಿದರು. ದೇಶದ ಸುಭದ್ರತೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಾವು ದೇಶದೊಳಗೆ ಧರ್ಮದ ಹೆಸೆರಿನಲ್ಲಿ ಕಚ್ಚಾಟ ನಡೆಸುತ್ತಿದ್ದರೆ ದೇಶದ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಈ ಕಾರಣಕ್ಕೆ ಪಕ್ಕದ ಚೀನಾ ನಮ್ಮ ಭೂಮಿಯನ್ನು ಅತಿಕ್ರಮಿಸುತ್ತಲೇ ಇದೆ ಇದು ಆತಂಕಕಾರಿಯಾದ ಸಂಗತಿಯಾಗಿದೆ ಎಂದು ಶಾಸಕರು ಹೇಳಿದರು.

ಕಾಂಗ್ರೆಸ್ ಗೆಲ್ಲಿಸಲು ಶ್ರಮವಹಿಸಿ: ಎಂ ಎಸ್
ಪದ್ಮರಾಜ್ ರಂಥ ಉತ್ತಮ ಅಭ್ಯರ್ಥಿಯನ್ನು ಕಾಂಗ್ರೆಸ್ ಜಿಲ್ಲೆಗೆ ನೀಡಿದೆ, ಅವರ ಗೆಲುವು ಅದು ಜಿಲ್ಲೆಯ ಜನತೆಯ ಗೆಲುವಾಗಲಿದೆ. ಜಿಲ್ಲೆಗೆ ಬೆಂಕಿ ಹಚ್ಚುವ ಮಾತನಾಡುತ್ತಿದ್ದ ಕಟೀಲ್ ರನ್ನು ಬಿಜೆಪಿಯೇ ಮೂಲೆಯಲ್ಲಿ ಕೂರಿಸಿದೆ. ಕಾಂಗ್ರೆಸ್ ಎಂದಿಗೂ ಜನರ ಜೀವನದ ಜೊತೆ ಚೆಲ್ಲಾಟವಾಡುವುದಿಲ್ಲ, ದೇಶದ ಅಭಿವೃದ್ದಿಗೆ ಕಾಂಗ್ರೆಸ್ ಬೆಂಬಲಿಸಿ ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಹೇಳಿದರು.

ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ: ಡಾ. ರಾಜಾರಾಂ
ಈ ಬಾರಿ ದ ಕ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ನಮಗಿದೆ. ದೇಶದ ಅಧಿಕಾರ ಚುಕ್ಕಾಣಿಯನ್ನೂ ಕಾಂಗ್ರೆಸ್ ಹಿಡಿಯಲಿದೆ. ಬಿಜೆಪಿಯ ಧರ್ಮ ರಾಜಕೀಯ, ಕೋಮು ದಲ್ಲೂರಿಗೆ ಜನ ಬೇಸತ್ತಿದ್ದಾರೆ. ಕೋಮು ಸಂಘರ್ಷದಿಂದ ದೇಶದಲ್ಲಿ ಅಭಿವೃದ್ದಿ ಕುಂಟಿತವಾಗಿದೆ. ಜನರ ನಡುವೆ ಪರಸ್ಪರ ವಿಶ್ವಾಸ ಕಳೆದುಕೊಳ್ಳುವ ಸನ್ನಿವೇಶವನ್ನು ಬಿಜೆಪಿ ಸೃಷ್ಟಿಸಿದೆ. ಗತ ವೈಭವ ಮರಳಿ ದೇಶ ಮತ್ತೆ ತನ್ನ ಹಿಂದಿನ ಛಾಪನ್ನು ಮೆರೆಯಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದನ್ನು ಜನ ತೀರ್ಮಾನಿಸಿದ್ದಾರೆ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಹೇಳಿದರು. ಡಿಸಿಸಿ ಕಾರ್ಯದರ್ಶಿ ನಝೀರ್‌ಮಠ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷರ ಮುರಳೀಧರ್ ರೈ ಮಟಂತಬೆಟ್ಟು, ವಲಯ ಅಧ್ಯಕ್ಷ ಸುಮಂತ್, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here