ದ್ವಿತೀಯ ಪಿ.ಯು.ಸಿ. ಫಲಿತಾಂಶ – ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಅತ್ತ್ಯುತ್ತಮ ಸಾಧನೆ

0

ಕಲಾ ವಿಭಾಗದ ಪುರೋಹಿತ್ ಖುಷಿಬೆನ್‌ ರಾಜ್ಯಕ್ಕೆ 3ನೇ ಸ್ಥಾನ
482 ವಿದ್ಯಾರ್ಥಿಗಳಿಗೆ ಅತ್ತ್ಯುನ್ನತ ಶ್ರೇಣಿ
331 ವಿದ್ಯಾರ್ಥಿಗಳಿಗೆ ಪ್ರಥಮ ಶ್ರೇಣಿ
ಕಾಲೇಜಿಗೆ 98.33% ಫಲಿತಾಂಶ

ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಳೆದ ಮಾರ್ಚ್ನಲ್ಲಿ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ರಲ್ಲಿ ವಿವೇಕಾನಂದ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ.

ಕಲಾ ವಿಭಾಗದಲ್ಲಿ ಪುರೋಹಿತ ಖುಷಿಬೆನ್‌ ರಾಜೇಂದ್ರ ಕುಮಾರ್ (ಉಪ್ಪಿನಂಗಡಿಯ ರಾಜೇಂದ್ರ ಕುಮಾರ್ ಹಾಗೂ ಮನೀಷಾ ಬೆನ್‌ಇವರ ಪುತ್ರಿ) ಇವರು 594 ಅಂಕಗಳನ್ನು ಗಳಿಸಿಕೊಳ್ಳುವುದರ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ ಹಾಗೂ ರಾಜ್ಯಕ್ಕೆತೃತೀರ‍್ಯಾಂಕ್ ಗಳಿಸಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ನೇತ್ರಾ ಡಿ. (ಬಂಟ್ವಾಳದ ಅರುಣ್‌ಕುಮಾರ್ ಹಾಗೂ ವಿಜಯಾ ಡಿ. ಇವರ ಪುತ್ರಿ) 592 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 6ನೇ ರ‍್ಯಾಂಕ್ ಗಳಿಸಿರುತ್ತಾರೆ. ವಾಣಿಜ್ಯ ವಿಭಾಗದ ವರ್ಷಾ ಪ್ರಕಾಶ್ (ತುಮಕೂರಿನ ಕೆ.ಎಸ್.ಪ್ರಕಾಶ್ ಹಾಗೂ ಟಿ.ಎಲ್. ನಳಿನಾ ಇವರ ಪುತ್ರಿ) ಇವರು 588 ಅಂಕಗಳನ್ನು ಗಳಿಸಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಗಮನ ಗೌರಿಎಸ್.ಎಮ್ (ಬೆಳ್ತಂಗಡಿಯ ಮಹೇಶ್‌ಎಸ್ ಹಾಗೂ ದೀಪಾ ಇವರ ಪುತ್ರಿ) 591 ಅಂಕಗಳನ್ನು ಗಳಿಸಿರುತ್ತಾರೆ ಹಾಗೂ ತನುಷ್ (ಪುತ್ತೂರಿನ ಹರೀಶ್ ನಾೖಕ್ ಹಾಗೂ ಅನಿತಾ ಇವರ ಪುತ್ರ), ನಿಶ್ಚಯ್‌ ರೈ (ಕಡಬದ ಉಮೇಶ್‌ರೈ ಹಾಗೂ ಸುನೀತಾರೈಇವರ ಪುತ್ರ) 590 ಅಂಕಗಳನ್ನು ಗಳಿಸಿರುತ್ತಾರೆ.
ಕಲಾ ವಿಭಾಗದಲ್ಲಿ ಅನಿಕಾ ರಶ್ಮಿ ಕೃಷ್ಣ (ಪುತ್ತೂರಿನ ಅರುಣ್ ಕೃಷ್ಣ ಹಾಗೂ ರುಚಿತಾ ಕೃಷ್ಣ ಇವರ ಪುತ್ರಿ) 588 ಅಂಕಗಳನ್ನು ಗಳಿಸಿರುತ್ತಾರೆ ಹಾಗೂ ವೈಷ್ಣವಿ(ಬಂಟ್ವಾಳದ ರಮೇಶ್‌ಚಂದ್ರ ಎನ್. ಎಸ್ ಹಾಗೂ ಪಿ.ಪ್ರೇಮಲತಾ ಇವರ ಪುತ್ರಿ) 587 ಅಂಕಗಳನ್ನು ಗಳಿಸಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಮಹೇಂದ್ರಗೋಪಾಲ್ ವಿಭಾಸ್ ಕೆ (ಪುತ್ತೂರಿನ ಪ್ರಸಾದ್ ಕೆ.ವಿ.ಎಲ್.ಎನ್ ಹಾಗೂ ಅನುಪಮಾಎಸ್. ಇವರ ಪುತ್ರ), ಕೆ.ಪ್ರಜ್ಞೇಶ್‌ಆಚಾರ್ಯ ( ಬಂಟ್ವಾಳದ ಕೆ.ರಮೇಶ್‌ ಆಚಾರ್ಯ ಹಾಗೂ ಆಶಾ ಆಚಾರ್ಯ ಇವರ ಪುತ್ರಿ) ರಿತೀಕ್ಷಾ ಬಿ. (ಪೆರ್ಲದ ಸುಬ್ಬಣ್ಣ ಪೂಜಾರಿ ಹಾಗೂ ರುಕ್ಮಿಣಿಇವರ ಪುತ್ರಿ), ರಕ್ಷಾ ಎಮ್. (ಬಂಟ್ವಾಳದ ಮೋಹನ್ ನಾಯಕ್ ಹಾಗೂ ಜಯಲಕ್ಷಿö್ಮಇವರ ಪುತ್ರಿ )587 ಅಂಕಗಳನ್ನು ಗಳಿಸಿರುತ್ತಾರೆ. ನಿಶ್ಮಿತಾ (ಬಂಟ್ವಾಳದ ಮಂಜಪ್ಪ ಮೂಲ್ಯ ಮತ್ತುಉಮಾವತಿಇವರ ಪುತ್ರಿ) 586 ಅಂಕಗಳನ್ನು ಗಳಿಸಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ 327 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ 218 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ವಾಣಿಜ್ಯ ವಿಭಾಗದಲ್ಲಿ 130 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ 62 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಕಲಾ ವಿಭಾಗದಲ್ಲಿ 25 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಒಟ್ಟು 482 ಉನ್ನತ ಶ್ರೇಣಿ ಲಭಿಸಿರುತ್ತದೆ.

ವಿಜ್ಞಾನ ವಿಭಾಗದಲ್ಲಿ 560 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 550 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 98.21% ಫಲಿತಾಂಶ ದಾಖಲಾಗಿರುತ್ತದೆ. ವಾಣಿಜ್ಯ ವಿಭಾಗದಲ್ಲಿ 241 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 237 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 98.34% ಫಲಿತಾಂಶ ದಾಖಲಾಗಿರುತ್ತದೆ. ಕಲಾ ವಿಭಾಗದಲ್ಲಿ 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 100% ಫಲಿತಾಂಶ ದಾಖಲಾಗಿರುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here