ಪುತ್ತೂರು: ಕಳೆದ ಹಲವಾರು ವರುಷಗಳಿಂದ ಗುಣಮಟ್ಟ ಮತ್ತು ವಿಶ್ವಾಸಾರ್ಹ ಸೇವೆಯ ಮೂಲಕ ಗ್ರಾಹಕರ ಮನಗೆದ್ದಿರುವ ನಗರದ ಹೊರವಲಯದ ಮಂಜಲ್ಪಡ್ಪುವಿನಲ್ಲಿ ವ್ಯವಹರಿಸುತ್ತಿರುವ ಮಂಗಲ್ ಸ್ಟೋರ್ಸ್ನ ನೂತನ ಮಳಿಗೆ “ಮಂಗಲ್ ಹೈಪರ್ ಮಾರ್ಕೆಟ್” ಪುತ್ತೂರಿನ ಹೃದಯ ಭಾಗದಲ್ಲಿರುವ ಜಿ.ಎಲ್.ಒನ್ ಮಾಲ್ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿದ್ದು, ನಾಡಿನ ಸಮಸ್ತ ನಾಗರೀಕರ ಮನಗೆದ್ದಿದೆ. ಶುಭಾರಂಭದ ಪ್ರಯುಕ್ತ ಕೂಪನ್ ಭರ್ತಿ ಮಾಡಿ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಆಯೋಜಿಸಲಾಗಿದ್ದು, ಗ್ರಾಹಕರ ಹೆಸರಿನೊಂದಿಗೆ ಸಂಪೂರ್ಣವಾಗಿ ಭರ್ತಿ ಮಾಡಿದ ಕೂಪನ್ಗಳನ್ನು ಮಳಿಗೆಯಲ್ಲಿ ಇರಿಸಲಾದ ಲಕ್ಕೀ ಬಾಕ್ಸ್ನಲ್ಲಿ ಎ.5ರ ಮೊದಲು ಹಾಕಲು ಅವಕಾಶ ನೀಡಲಾಗಿತ್ತು. ಎ.10ರಂದು ಡ್ರಾ. ನಡೆದಿದ್ದು, ರೂ.2000, 1000 ಹಾಗೂ ರೂ.500 ಮೌಲ್ಯದ ಶಾಪಿಂಗ್ ವೋಚರ್ಗಳನ್ನು ಗೆದ್ದ ಅದೃಷ್ಟಶಾಲಿಗಳ ವಿವರ ಇಲ್ಲಿದೆ.
ಡಾ. ಕೆವಿ ಭಟ್ 500 ರೂ ಲಕ್ಕಿ ವೋಚರ್ ಡ್ರಾ ನಡೆಸಿ ಕೊಟ್ಟಿದ್ದು, 0691 ಸಂಖ್ಯೆಯ ರಮೇಶ್ ಅಂಗರಾಜೆ, 5009 ವಾಣಿ ವಿಟ್ಲ, 1507 ರಾಮ್ ಪ್ರಸಾದ್, 3427 ಅನಿಕಾ ಪಿಜೆ, 7422 ಅಜಿತ್, 3289 ಅಬ್ದುಲ್ ರಝೀಲ್, 5271 ಅಬೂಬಕ್ಕರ್ ಎ ಕೆ, 3780 ಆಯಿಷಾ ಯೂಸುರ್, 1686 ರಂಜನ್ ಎಸ್, 9404 ಫಾತಿಮಾ ಉಪ್ಪಿನಂಗಡಿ 500 ರೂ ಮೌಲ್ಯದ ಲಕ್ಕೀ ಖರೀದಿ ವೋಚರ್ ಗೆದ್ದುಕೊಂಡಿದ್ದಾರೆ.
ಸಚಿನ್ ಟ್ರೇಡರ್ಸ್ ಮಾಲಕ ಸಚಿನ್ 1000 ರೂ ಮೌಲ್ಯದ ಲಕ್ಕಿ ವೋಚರ್ ಡ್ರಾ ನಡೆಸಿಕೊಟ್ಟಿದ್ದು, 0813 ದಿನೇಶ್ ಕೊಡಿಪ್ಪಾಡಿ, 3518 ಕೆ ಅನಿಲ್ ಕುಮಾರ್, 3309 ರಾಕೇಶ್ ಕುಮಾರ್ 1000 ರೂ ಮೌಲ್ಯದ ಲಕ್ಕೀ ಖರೀದಿ ವೋಚರ್ ಗೆದ್ದುಕೊಂಡಿದ್ದಾರೆ.
ಜಿಲ್ ಎಲ್ ಒನ್ ಮಾಲ್ನ ಸುದನ್ವ ಆಚಾರ್ಯ 2000 ರೂ. ಲಕ್ಕಿ ವೋಚರ್ ಡ್ರಾ ನಡೆಸಿಕೊಟ್ಟಿದ್ದು, 3765 ಅಬ್ದುಲ್ ಮಜೀದ್ ಕೊಡಾಜೆ 2000 ರೂ ಮೌಲ್ಯದ ಲಕ್ಕೀ ಖರೀದಿ ವೋಚರ್ ಗೆದ್ದುಕೊಂಡಿದ್ದಾರೆ. ವಿಜೇತರು ವೋಚರ್ ಮೌಲ್ಯದ ವಸ್ತುಗಳನ್ನು ಖರೀದಿಸಬಹುದಾಗಿದೆ.
ಮಾಸ್ಟರ್ ಪ್ಲಾನರಿಯ ಮಾಲಕ ಆಕಾಶ್, ಸುದನ್ವ ಆಚಾರ್ಯ, ಜಿಲ್ ಎಲ್ ಒನ್ ಮಾಲ್ ಮ್ಯಾನೇಜರ್ ಸಂತೋಷ್, ಆರ್ವಿ ಇಂಟರ್ ಗ್ರಾಫಿಕ್ಸ್ನ ಜ್ಞಾನೇಶ್, ಮಂಗಲ್ ಸ್ಟೋರ್ ಪಾಲುದಾರ ರಾಘವೇಂದ್ರ ನಾಯಕ್, ಮಂಗಲ್ ಸ್ಟೋರ್ನ ಮ್ಯಾನೇಜರ್ ಅಭಿಷೇಕ್ ಸಹಕರಿಸಿದರು.