ಕೆಯ್ಯೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಮೂರು ವಿಭಾಗಗಳಲ್ಲೂ ಶೇಕಡ 100 ಫಲಿತಾಂಶ ದಾಖಲಿಸಿದೆ. ಕಾಲೇಜಿಗೆ ಎರಡನೇ ಬಾರಿ ಶೇಕಡ 100 ಫಲಿತಾಂಶ ಬಂದಿರುತ್ತದೆ ಪರೀಕ್ಷೆಗೆ ಹಾಜರಾದ ಎಲ್ಲಾ 70 ವಿದ್ಯಾರ್ಥಿಗಳು ಉತ್ತೀರ್ಣರಾಗಿತ್ತಾರೆ.
15 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 48 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಏಳು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 600 ರಲ್ಲಿ 584 ಅಂಕಗಳನ್ನು ಫಾತಿಮತ್ ಝಿಯಾನ ಪಡೆದುಕೊಂಡಿರುತ್ತಾರೆ. ಆಯಿಷತ್ ಶಹ್ಮ 579, ರಕ್ಷಿತಾ ಕೆ-572,ದೀಪ್ತಿ-543, ಮಿಥುನ್-541, ಎನ್ ದೀಕ್ಷಿತ್-533, ಮೋಕ್ಷಿತ್ ಬಿ.ಎ-530, ಹಾಗೂ ಸಿಂಚನ-524 ಅಂಕಗಳನ್ನು ಪಡೆದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 600ರಲ್ಲಿ 556 ಕುಮಾರಿ ರುಚಿತಾ ಪಡೆದಿರುತ್ತಾರೆ.ಹವ್ಯಾ ಕೆ-541, ಮಹಮ್ಮದ್ ಪವಾಜ್-535, ಪ್ರೇಕ್ಷಾ ರೈ-528, ಶ್ರೀನಿಧಿ-514, ಹಿತಾ-513 ಅಂಕಗಳನ್ನು ಗಳಿಸಿರುತ್ತಾರೆ.ಕಲಾವಿಭಾಗದಲ್ಲಿ ಅತಿ ಹೆಚ್ಚು ಅಂದರೆ 600 ರಲ್ಲಿ 534 ಅಂಕಗಳನ್ನು ಕುಮಾರಿ ಕೃತಿಕಾ ಪಡೆದಿರುತ್ತಾರೆ, ವಿನುತಾ-505, ಧನ್ಯಶ್ರೀ-502 ಅಂಕಗಳನ್ನು ಪಡೆದಿರುತ್ತಾರೆ.