ಉಪ್ಪಿನಂಗಡಿ : ಶಿರಾಡಿ ಗ್ರಾಮದ ಗುಂಡ್ಯ ಅಡ್ಡೋಳೆ ಪರಿಸರದಲ್ಲಿ ಎ.12ರಂದು ಸಾಯಂಕಾಲ ದಿಢೀರ್ ಮಳೆ ಸುರಿದು ತಂಪು ವಾತಾವರಣವನ್ನು ಸೃಷ್ಠಿಸಿತು.
ಸುಡುವ ಬಿಸಿಲ ಧಗೆಯ ನಡುವೆ ಆಕಾಶದಲ್ಲಿ ಕಾಣಿಸಿದ ಕರಿಮೋಡ ಮಳೆಯಾಗಿ ಭೂಮಿಗೆ ಸುರಿಯತೊಡಗಿ ಪರಿಸರದಾದ್ಯಂತ ತಂಪು ವಾತಾವರಣ ಸೃಷ್ಠಿಸಿತು. ಸುಮಾರು ಅರ್ಧಗಂಟೆ ಕಾಲ ದಿಢೀರ್ ಸುರಿದ ಮಳೆಯಿಂದಾಗಿ ಪರಿಸರದ ಜನತೆ ಸಂತಸಕ್ಕೊಳಗಾದರು.