ಈಶ್ವರಮಂಗಲು: ಅರಿಯಡ್ಕ ಏಳ್ನಾಡುಗುತ್ತು ಕುಟುಂಬದ ನವೀಕೃತ ತರವಾಡು ಮನೆಯ ಗೃಹಪ್ರವೇಶ, ಧರ್ಮದೈವ ಪಿಲಿಭೂತದ ನೂತನ ದೈವಸ್ಥಾನ ಮತ್ತು ದೊಂಪದ ಬಲಿ ಉತ್ಸವ ನಡೆಯುವಲ್ಲಿ ನವೀಕೃತಕೊಂಡ ಉತ್ಸವಕಟ್ಟೆಗಳು, ಪಿಲಿ ಮತ್ತು ಪಿಲಿಕೊಟ್ಯಗಳ ಹಾಗೂ ಖಂಡಿಗದಲ್ಲಿ ನಿರ್ಮಿಸಿದ ಗುಳಿಗದೈವದ ಕಟ್ಟೆಯ ಪ್ರತಿಷ್ಠೆ, ಬ್ರಹ್ಮಕಲಶ ಮತ್ತು ಧರ್ಮದೈವ ಮತ್ತು ಪರಿವಾರ ದೈವಗಳ ನೇಮವು ಎ.21ರಿಂದ ಎ.24ರ ವರೆಗೆ ಅರಿಯಡ್ಕ ಏಳ್ನಾಡುಗುತ್ತು ತರವಾಡು ಮನೆಯಲ್ಲಿ ನಡೆಯಲಿದ್ದು ಇದರ ಆಂಗವಾಗಿ ಸಮಾಲೋಚನ ಸಭೆ ಆರಿಯಡ್ಕ ಏಳ್ನಾಡುಗುತ್ತುನಲ್ಲಿ ನಡೆಯಿತು.
ಕುಟುಂಬದ ಸದಸ್ಯ ಎ.ಲಕ್ಷ್ಮೀನಾರಾಯಣ ಶೆಟ್ಟಿ ತಿಂಗಳಾಡಿ ಮಾತನಾಡಿ, ಎ.21ರಿಂದ ಎ.24ರ ವರೆಗೆ ನಡೆಯಲಿದ್ದು ಆಮಂತ್ರಣ ಪತ್ರಿಕೆ ಹಂಚಿಕೆ, ಊಟ-ಉಪಾಹಾರ, ಹೊರಕಾಣಿಕೆ ಹಾಗೂ ವಿವಿಧ ಸಮಿತಿಗಳ ಕಾರ್ಯ ಬಗ್ಗೆ ಮಾಹಿತಿ ಪಡೆದುಕೊಂಡರು. ಕುಟುಂಬದ ಸದಸ್ಯರಲ್ಲದೇ, ಗಣ್ಯರು, ಗ್ರಾಮಸ್ಥರು ಭಾಗವಹಿಸುತ್ತಾರೆ. ಯಾವುದೇ ಕುಂದುಕೊರತೆ ಬಾರದ ಹಾಗೇ ಎಲ್ಲಾ ಸಮಿತಿಯವರು ಕಾರ್ಯನಿರ್ವಹಿಸುವ ಜವಾಬ್ದಾರಿ ಇದೆ. ಎ.22ರಂದು ತರುವಾಡು ಮನೆಯ ಗೃಹಪ್ರವೇಶ ನಡೆಯಲಿದ್ದು ಸುಮಾರು 1,500 ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಕುಟುಂಬದ ಹಿರಿಯರಾದ ಚಿಕ್ಕಪ್ಪ ನಾಕ್ ಆಧ್ಯಕ್ಷತೆ ವಹಿಸಿ ಮಾತನಾಡಿ ಕುಟುಂಬದ ಸದಸ್ಯರು ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ. 4 ದಿನದ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆಸಲು ಕುಟುಂಬ ಸದಸ್ಯರೆಲ್ಲರೂ ಕಾತರರಾಗಿದ್ದಾರೆ ಎಂದು ಹೇಳಿದರು. ಕುಟುಂಬದ ಸದಸ್ಯ ಆರ್ಥಿಕ ಸಮಿತಿಯ ಸಂಚಾಲಕ ತಿಮ್ಮಪ್ಪ ರೈ ಪಾಪೆಮಜಲು ಮಾತನಾಡಿ ಕುಟುಂಬದ ಸದಸ್ಯರು ನೀಡಿದ ಧನಸಹಾಯವನ್ನು ಮಂಡಿಸಿದರು. ಇನ್ನೂ ಹೆಚ್ಚಿನ ಧನ ಸಹಾಯದ ನಿರೀಕ್ಷೆಯಲ್ಲಿ ಇದ್ದೇವೆ. ಸಕಲ ಸಿದ್ಧತೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಕುಟುಂಬದ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು.
ಕುಟುಂಬದ ಪ್ರಮುಖರಾದ ಎ.ಸುಬ್ಬಯ್ಯ ಶೆಟ್ಟಿ, ಎ.ಕೆ.ರೈ, ಶಾರದಾ ಸಿ ರೈ, ಡಾ.ದೀಪಕ್ ರೈ, ಬಾಲಚಂದ್ರ ರೈ ಬೆದ್ರುಮಾರು, ಸಂದೀಪ್ ರೈ, ಸುಬೋಧ ರೈ, ಕರುಣಾಕರ ರೈ, ಸಾರ್ಥಕ್ ರೈ, ವಿನೋದ್ ಶೆಟ್ಟಿ, ವಿವೇಕ್ ರೈ, ಬ್ರಿಜೇಶ್ ಶೆಟ್ಟಿ, ಅರುಣ್ ರೈ, ಸದಾಶಿವ ರೈ ಬೆಳ್ಳಿಪ್ಪಾಡಿ, ಪ್ರತೀಕ್ ಶೆಟ್ಟಿ, ಚಂದ್ರಶೇಖರ್ ರೈ, ವಜ್ರದೀಪಕ್ ರೈ, ಸತೀಶ್ಚಂದ್ರ ರೈ, ಸಂದೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕುಟುಂಬದ ಸದಸ್ಯ ಸುಭಾಶ್ಚಂದ್ರ ರೈ ಪಡ್ಯೋಡಿ ಸ್ವಾಗತಿಸಿದರು. ಶ್ರೀರಾಮ್ ಪಕ್ಕಳ ವಂದಿಸಿದರು.