ಪುತ್ತೂರು: ದ.ಕ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನ ಮತದಾರರಿಗೆ ಏ.14ರಿಂದ ಮೂರು ದಿನ ಮನೆಯಲ್ಲೇ ಮತದಾನಕ್ಕೆ ನಿಗದಿಪಡಿಸಲಾಗಿತ್ತು. ಏ.14ರಂದು ಸೌರಮಾನ ಯುಗಾದಿ(ವಿಷು) ಹಬ್ಬವಾಗಿರುವುದರಿಂದ ಮತದಾರರ ಕೋರಿಕೆಯಂತೆ ಏ.14ರ ಬದಲು ಏ.15ರಿಂದ ಮೂರು ದಿನಗಳ ಕಾಲ ಮನೆ ಮನೆ ಮತದಾನ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಅವರು ತಿಳಿಸಿದ್ದಾರೆ.
85 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನ ಮತದಾರರಿಗೆ ಏ.15ರಿಂದ 17ರ ತನಕ ಮನೆಯಲ್ಲೇ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಹಿಂದೆ ನಿಗದಿ ಪಡಿಸಿದ ತಂಡವೇ ಏ.14ರ ಮಾರ್ಗಸೂಚಿಯನ್ನು ಏ.15ರಂದು ನಡೆಸಲಿದೆ. ಮತದಾರರು ದಿನ ಬದಲಾವಣೆಯನ್ನು ಗಮನಿಸುವಂತೆ ಜುಬಿನ್ ಮೊಹಪಾತ್ರ ಅವರು ತಿಳಿಸಿದ್ದಾರೆ.