ಕೋಡಿಂಬಾಳ: ನದಿ ನೀರಲ್ಲಿ ವಿದ್ಯುತ್ ಶಾಕ್..! ಸಾಕು ದನಗಳನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ವೇಳೆ ಘಟನೆ

0

ಕಡಬ: ಕೋಡಿಂಬಾಳ ಗ್ರಾಮದ ಕೊರಿಯಾರ್ ಎಂಬಲ್ಲಿ ಕುಮಾರಧಾರ ನದಿಯಲ್ಲಿ ವ್ಯಕ್ತಿಯೊಬ್ಬರಿಗೆ ವಿದ್ಯುತ್ ಶಾಕ್ ಹೊಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಾರದ ಹಿಂದೆ ಘಟನೆ ನಡೆದಿದೆ ಎನ್ನಲಾಗಿದೆ.

ಕಾಲನಿಯಲ್ಲಿರುವ ವ್ಯಕ್ತಿಯೊಬ್ಬರಿಗೆ ವಿದ್ಯುತ್ ಶಾಕ್ ಹೊಡೆದಿದೆ. ತನ್ನಮನೆಯ ದನಗಳು ನದಿ ದಾಟಿ ಹೋಗಿ ಬೇರೆಯವರ ತೋಟಕ್ಕೆ ನುಗ್ಗಿದ್ದವು. ಅವುಗಳನ್ನು ಆ ಭಾಗದ ವ್ಯಕ್ತಿಯೊಬ್ಬರು ಕಟ್ಟಿ ಹಾಕಿದ್ದರು. ವಾಪಾಸು ಬಿಡಿಸಿಕೊಂಡು ಬರುವಾಗ ನದಿಯಲ್ಲಿ ದನಗಳು ಅಡ್ಡಾದಿಡ್ಡಿ ಓಡಿದ್ದು ಈ ವೇಳೆ ದನದ ಹಗ್ಗ ಹಿಡಿದುಕೊಂಡ ವ್ಯಕ್ತಿಗೆ ಏಕಾಏಕಿ ಶಾಕ್ ಹೊಡೆದಿದೆ ಎನ್ನಲಾಗಿದೆ.
ಬಳ್ಪ ಗ್ರಾಮವನ್ನು ಸಂಪರ್ಕಿಸಲು ತಾತ್ಕಾಲಿಕ ರಸ್ತೆಯನ್ನು ಮಾಡಲಾಗಿದ್ದು ಇದರ ಪಕ್ಕದಲ್ಲೇ ಕೃಷಿಕರು ಪಂಪ್ ಅಳವಡಿಸಿದ್ದು ಅದರ ಕೇಬಲ್‌ಗೆ ಹಾನಿಯಾಗಿ ವಿದ್ಯುತ್ ಶಾಕ್ ಹೊಡೆದಿರಬಹುದೆಂದು ಸಂಶಯ ಪಡಲಾಗಿದೆ.

LEAVE A REPLY

Please enter your comment!
Please enter your name here