ಎ.20ರಿಂದ ವಾಲಿಬಾಲ್ ತರಬೇತಿ ಬೇಸಿಗೆ ಶಿಬಿರ

0

ಪುತ್ತೂರು: ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಪುತ್ತೂರು ಮತ್ತು ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಹಾಗು ಲಿಟ್ಲ್ ಫ್ಲವರ್ ಸ್ಕೂಲ್ ದರ್ಬೆ ಇದರ ಸಂಯುಕ್ತ ಆಶ್ರಯದಲ್ಲಿ ಎ.20ರಿಂದ ಒಂದು ತಿಂಗಳು ದರ್ಬೆ ಲಿಟ್ಲ್ ಫ್ಲವರ್ ಶಾಲೆಯ ಮೈದಾನದಲ್ಲಿ ಉಚಿತವಾಗಿ ವಾಲಿಬಾಲ್ ತರಬೇತಿಯ ಬೇಸಿಗೆ ಶಿಬಿರ ಆರಂಭಗೊಳ್ಳಲಿದೆ ಎಂದು ಮಿತ್ರವೃಂದ ವಾಲಿಬಾಲ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕೆ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


10 ರಿಂದ 18 ವರ್ಷದ ವಯೋಮಾನದವರು ವಾಲಿಬಾಲ್ ತರಬೇತಿ ಶಿಬಿರದಲ್ಲಿ ಭಾಗವಹಿಸ ಬಹುದು. ಎ.20ಕ್ಕೆ ಬೆಳಿಗ್ಗೆ ನೋಂದಾವಣೆ ನಡೆಯಲಿದ್ದು, ಪ್ರತಿ ದಿನ ಬೆಳಿಗ್ಗೆ ಗಂಟೆ 6.45 ರಿಂದ 8.45 ಮತ್ತು ಸಂಜೆ ಗಂಟೆ 4.30 ರಿಂದ 6.30ರ ತನಕ ಶಿಬಿರ ನಡೆಯಲಿದೆ. ನಮ್ಮ ಅಕಾಡೆಮಿಯ ಮೂಲಕ ತರಬೇತಿ ಪಡೆದ ಅನೇಕ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದ್ದಾರೆ. ವಿಶೇಷವಾಗಿ ಮಹಿಳಾ ತಂಡವೂ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದೆ. ಶಿಬಿರದಲ್ಲಿ ಸುಮಾರು 60ಕ್ಕಿಂತ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಎಂದವರು ಹೇಳಿದರು.


ರೋಟರಿ ಕ್ಲಬ್ ಬೀರುಮಲೆ ಹಿಲ್ಸ್ ಇದರ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ಮಾತನಾಡಿ ಶಾರೀರಿಕವಾಗಿ ದೃಢಗೊಳ್ಳಲು ವಾಲಿಬಾಲ್ ಹೆಚ್ಚು ಮಹತ್ವ ಪಡೆದಂತೆ ಶೈಕ್ಷಣಿಕವಾಗಿಯೂ ಮಹತ್ವ ಪಡೆದಿದೆ. ಈ ನಿಟ್ಟಿನಲ್ಲಿ ವಾಲಿಬಾಲ್ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಅವರು ವಿನಂತಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಿತ್ರವೃಂದ ವಾಲಿಬಾಲ್ ಅಕಾಡೆಮಿಯ ಅಧ್ಯಕ್ಷ ಪಿ.ವಿ.ಕೃಷ್ಣನ್, ಜೊತೆ ಕಾರ್ಯದರ್ಶಿ ಪ್ರಸನ್ನ ಕುಮಾರ್ ಕೆ.ಆರ್, ಮುಖ್ಯ ತರಬೇತುದಾರ ಪಿ.ವಿ.ನಾರಾಯಣನ್, ರಾಘವ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here