ಪಕ್ಷ ಸಂಘಟನೆಗೆ ಬೂತ್ ಮಟ್ಟದಲ್ಲಿ ಕೆಲಸ ಆಗಬೇಕಿದೆ; ಅಶೋಕ್ ರೈ
ಪುತ್ತೂರು: ಜನತೆ ಕಾಂಗ್ರೆಸ್ ಪರ ಇದ್ದು ಅದನ್ನು ಬಳಕೆ ಮಾಡಿಕೊಂಡು ಪಕ್ಷವನ್ನು ಗಟ್ಟಿಗೊಳಿಸಬೇಕಾದ ಕೆಲಸ ಬೂತ್ ಮಟ್ಟದಲ್ಲಿ ಆಗಬೇಕು ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಪರ್ಲಡ್ಕದಲ್ಲಿ ನಡೆದ ಬೂತ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಅವಿರತ ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಎಂ ಬಿ ವಿಶ್ವನಾಥ ರೈ, ಡಾ. ರಾಜಾರಾಂ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಶಕೂರ್ ಹಾಜಿ, ಉಸ್ತುವಾರಿಗಳಾದ ಮುರಳೀದರ್ ರೈ ಮಟಂತಬೆಟ್ಟು ಮೌರಿಶ್ ಮಸ್ಕರೇನಸ್, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ ,ರಮಾನಾಥ ವಿಟ್ಲಬೂತ್ ಅಧ್ಯಕ್ಷರುಗಳಾದ ಸೂಫಿ ಬಪ್ಪಳಿಗೆ,ಅಬ್ದುಲ್ ರಹಿಮಾನ್ ಅಝಾದ್ ,ಮೂಸೆ ಕುಂಞಿ, ಸಿನಾನ್ ಪರ್ಲಡ್ಕ, ವಾಲ್ಟರ್ ,ಆನಂದ, ಮೋನು ಬಪ್ಪಳಿಗೆ,ಅಲಿ ಪರ್ಲಡ್ಕ,ಇಕ್ಬಾಲ್, ಝೈದ್, ನೌಫಲ್, ಸಿನಾನ್, ಸಿಯಾನ್ ದರ್ಬೆ, ಸಂತೋಷ್ ಮುಡೋಡಿ, ಸಚಿನ್ ಮೊದಲಾದವರು ಉಪಸ್ಥಿತರಿದ್ದರು.