ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವದ ದಿನ ಎ.17ರಂದು ಪ್ರತಿ ವರ್ಷದಂತೆ ಪುತ್ತೂರು ವಕೀಲರ ಸಂಘದಿಂದ ಭಕ್ತರಿಗೆ ಉಚಿತವಾಗಿ ಕುಡಿಯುವ ನೀರಿನ ವಿತರಣೆ ಕಾರ್ಯಕ್ರಮ ಉದ್ಘಾಟನೆಗೊಂಡಿತ್ತು.
ದ.ಕ.ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಸರಿತಾ ಡಿ ಅವರು ಶುದ್ದ ಕುಡಿಯುವ ನೀರು ಕೇಂದ್ರವನ್ನು ಉದ್ಘಾಟಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಗೌರ ಆರ್.ಪಿ ಅವರು ದೇವಳದ ಜಾತ್ರೋತ್ಸವ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ ಅವರಿಗೆ ಕುಡಿಯುವ ನೀರನ್ನು ವಿತರಿಸಿದರು. ವಕೀಲರ ಸಂಘದ ಅಧ್ಯಕ್ಷ ಜಿ.ಜಗನ್ನಾಥ ರೈ ಅವರು ಮಾತನಾಡಿ ವಕೀಲರು ಸಾಮಾಜಿಕ ಕಾರ್ಯಕ್ರಮದೊಂದಿಗೆ ಸಾರ್ವಜನಿಕರ ಸಂಪರ್ಕವನ್ನು ಬೆಳೆಸುವ ವಿನೂತನ ಕಾರ್ಯಕ್ರಮವಾಗಿದೆ ಎಂದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸರಸ್ವತಿ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಬಾಲಕೃಷ್ಣ ನಾಯಕ್, ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ವಸಂತ ಶಂಕರ್ ವಾಗ್ಲೆ, ದ್ವಾರಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಮಾತನಾಡಿದರು. ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಮನೋಹರ್ ಕೆವಿ, ಪುಡಾ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ ಕಕ್ವೆ, ಕುಮಾರನಾಥ ಎಸ್, ವಿರೂಪಾಕ್ಷ ಭಟ್, ಅಕ್ಷಿತ್, ತೇಜಸ್, ತೀರ್ಥಪ್ರಸಾದ್, ದೀಪಕ್ ಬೊಳುವಾರು ಅತಿಥಿಗಳನ್ನು ಗೌರವಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಚಿನ್ಮಯ್ ರೈ ಸ್ವಾಗತಿಸಿ, ಕೋಶಾಧಿಕಾರಿ ಮಹೇಶ್ ಕೆ ಸವಣೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಮೋನಪ್ಪ ಎಂ ಅಳಿಕೆ, ಜತೆಕಾರ್ಯದರ್ಶಿ ಮಮತಾ ಸುವರ್ಣ, ಹೀರಾ ಉದಯ್ , ಸುರೇಶ್ ರೈ ಪಡ್ಡಂಬೈಲು, ವಿಶ್ವನಾಥ ಕುಲಾಲ್, ಸ್ವಾತಿ ಜೆ ರೈ ಸಹಿತ ಹಲವಾರು ಮಂದಿ ವಕೀಲರುಗಳು ಉಪಸ್ಥಿತರಿದ್ದರು.