ಮಂಡೆಕೋಲು ಗ್ರಾಮ ಮುರೂರು ಸಮೀಪ ಪರಪ್ಪೆ ನದಿಯಲ್ಲಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಈಶ್ವರಮಂಗಲದ ನಾಲ್ಕು ಜನ ಮುರೂರು ಸಮೀಪ ಪರಪ್ಪೆ ಹೊಳೆಗೆ ಮೀನು ಹಿಡಿಯಲು ಬಂದಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ನಾಲ್ವರಲ್ಲಿ ಒಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿ ಈಶ್ವರಮಂಗಲ ಪ್ರವೀಣ್ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಪೈಚಾರ್ ಮುಳುಗು ತಜ್ಞರ ತಂಡದವರು ನದಿಯಿಂದ ಮೇಲೆತ್ತಿ ಸುಳ್ಯ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಸುಳ್ಯ ಪೋಲಿಸ್ ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.