ಪುತ್ತೂರು: ರಾಮನವಮಿ ಪ್ರಯುಕ್ತ ಉಡುಪಿ ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ ಧೀಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ ಪುತ್ತೂರು ಇವರಿಂದ ತಾಳಮದ್ದಳೆ, ಗಣೇಶ್ ಕೊಲೆಕ್ಕಾಡಿ ವಿರಚಿತ ಪ್ರಸಂಗ, ‘ಸಮರ ಸೌಗಂಧಿಕಾ’ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ , ಚೆಂಡೆಯಲ್ಲಿ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ಮದ್ದಳೆಯಲ್ಲಿ ರಾಮಕೃಷ್ಣ ಭಟ್ ಯಲ್ಲಾಪುರ ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ(ಭೀಮ), ಜಯಲಕ್ಷ್ಮಿ ವಿ ಭಟ್(ದ್ರೌಪದಿ), ಹೀರಾ ಉದಯ್(ಹನುಮಂತ), ಅಮಿತಾ ಕ್ರಮಧಾರಿ(ಕುಬೇರ) ಭಾಗವಹಿಸಿದರು. ಮಠದ ವತಿಯಿಂದ ಕಲಾವಿದರನ್ನು ಶಾಲು ಹೊದಿಸಿ ಗೌರವಿಸಿದರು. ಪರ್ಯಾಯ ಪುತ್ತಿಗೆ ಶ್ರೀಗಳು ಫಲ, ಮಂತ್ರಾಕ್ಷತೆ ನೀಡಿ ಹರಸಿದರು.