ಪುತ್ತೂರು: ಪುತ್ತೂರು ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಶ್ರೀ ರಾಮೋತ್ಸವ ಸಮಿತಿ ಮಡಿಕೇರಿ ಇವರಿಂದ ನಡೆಸಲ್ಪಡುವ 130ನೇ ವರ್ಷದ ರಾಮೋತ್ಸವದ ಅಂಗವಾಗಿ ಮಡಿಕೇರಿಯಲ್ಲಿ ಹಟ್ಟಿಯಂಗಡಿ ರಾಮಭಟ್ಟ ವಿರಚಿತ ಶರಸೇತು ಬಂಧ(ಶ್ರೀ ರಾಮ ದರ್ಶನ) ಎಂಬ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಜಯರಾಮ ಭಟ್, ಮುರಳೀಧರ ಕಲ್ಲೂರಾಯ,ಸಹಕರಿಸಿದರು. ಹಿಮ್ಮೇಳದಲ್ಲಿ ಶುಭಾ .ಜೆ.ಸಿ.ಅಡಿಗ( ಹನೂಮಂತ ), ಕಿಶೋರಿ ದುಗ್ಗಪ್ಪ ನಡುಗಲ್ಲು (ಅರ್ಜುನ), ಗಾಯತ್ರಿ ಹೆಬ್ಬಾರ್( ವೃದ್ಧ ಬ್ರಾಹ್ಮಣ, ಶ್ರೀರಾಮ) ಸಹಕರಿಸಿದರು. ರಾಮೋತ್ಸವ ಸಮಿತಿಯ ಗೌರವಕಾರ್ಯದರ್ಶಿ ಗೀತಾ ಗಿರೀಶ್ ನಿರೂಪಿಸಿದರು. ಆಂಜನೇಯ ಮಹಿಳಾ ಯಕ್ಷಗಾನ ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕ ಸುಬ್ರಾಯ ಸಂಪಾಜೆ ವಂದಿಸಿದರು. ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಅನಂತ ಸುಬ್ಬರಾವ್ ಕಲಾವಿದರಿಗೆ ಶುಭ ಹಾರೈಸಿದರು.