ಪುತ್ತೂರು: ಲೋಕಸಭಾ ಹಿನ್ನೆಲೆಯಲ್ಲಿ ಎ.21 ನಡೆದ ಬಿಜೆಪಿ ಮನೆ ಮನೆ ಭೇಟಿಯ ಮಹಾ ಸಂಪರ್ಕ ಅಭಿಯಾನದ ಅಂಗವಾಗಿ ಬೆಟ್ಟಂಪಾಡಿ ಬೂತ್ 166ರಲ್ಲಿ ಪಕ್ಷದ ಕಾರ್ಯಕರ್ತರು ಮನೆ ಮನೆ ಅಭಿಯಾನ ನಡೆಸಿದರು.
ಬೂತ್ ಅಧ್ಯಕ್ಷ ಪ್ರಕಾಶ್ ರೈ ಬೈಲಾಡಿ, ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾಶ್ರೀ ಸುರೇಶ್, ಸದಸ್ಯೆ ಉಮಾವತಿ, ತಾಲೂಕ ಉಪಾಧ್ಯಕ್ಷೆ ಮೀನಾಕ್ಷಿ ಮಂಜುನಾಥ, ಕೃಷ್ಣಪ್ಪ ಪೂಜಾರಿ, ಸುರೇಶ್ ಸರಳಿಕಾನ, ಶಶಿತ್ ಸರಳಿಕಾನ, ಚರಣ್ ಉಪ್ಪಳಿಗೆ, ಚಂದ್ರ ಸರಳಿಕಾನ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು