ಪುತ್ತೂರು : ಸ್ಪರ್ಧಾತ್ಮಕ ಪರೀಕ್ಷೆಗಳು, ವಿದ್ಯಾರ್ಥಿ ವೇತನಗಳು, ಸೈನಿಕ/ನವೋದಯ ಪ್ರವೇಶ ಪರೀಕ್ಷೆಗಳಿಗೆ ಅನ್ವಯವಾಗುವಂತೆ ವಿಶಿಷ್ಟ ಬೇಸಿಗೆ ಶಿಬಿರವು ಇಲ್ಲಿನ
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿ ಶಾಲಾ ,ಕಾಲೇಜು ಮಕ್ಕಳಿಗೆ ವಿಶೇಷ ಬೇಸಿಗೆ ಶಿಬಿರ ಆಯೋಜನೆ ಮಾಡಿದೆ.
ಪುತ್ತೂರು ಹಾಗೂ ಸುಳ್ಯ ಶಾಖೆಯಲ್ಲಿ 5 ರಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ , ಎಳೆ ವಯಸ್ಸಿನಲ್ಲೇ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಹಾಗೂ ಖಾಸಗಿ ವಲಯಗಳಲ್ಲಿ ಲಭ್ಯವಿರುವ ವಿದ್ಯಾರ್ಥಿವೇತನಗಳ ಪರೀಕ್ಷೆಗಳನ್ನೂ ಎದುರಿಸುವ ಬಗ್ಗೆ ವಿಶಿಷ್ಟ ತರಬೇತಿ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು , ಏ. 21 ರಂದು ಅಕಾಡೆಮಿ ಇದರ ಗೌರವ ತರಬೇತುದಾರರಾದ ವೇಣುಗೋಪಾಲ್ ಕಾರ್ಯವನ್ನು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿ , ಉದ್ಘಾಟಿಸಿ , ಹಾರೈಸಿದರು.
ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶಿಬಿರದ ಆಯೋಜನೆ ಉದ್ದೇಶ ಮತ್ತು ಪ್ರಯೋಜನ ಬಗ್ಗೆ ವಿಸ್ತಾರವಾಗಿ ಮಾರ್ಗದರ್ಶನ ನೀಡಿದರು. ಈ ವೇಳೆ ವಿದ್ಯಾಮಾತಾದ ತರಬೇತಿ ತಂಡ , ಸಿಬ್ಬಂದಿ ವರ್ಗದವರು ಕೂಡ ಹಾಜರಿದ್ದರು.