ನರಿಮೊಗರು: ಇಲ್ಲಿನ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಎ.21ರಂದು ಸಂಜೆ ಶ್ರೀದೇವರಿಗೆ ಲಘನ್ಯಾಸಪೂರ್ವಕ ಏಕವಾರ ರುದ್ರಾಭಿಷೇಕ ಶ್ರೀ ನಂದೀಶ್ವರ ಪೂಜೆ, ದೀಪಾರಾಧನೆ, ಶಿವಾಷ್ಟೋತ್ತರ, ಕಥಾಶ್ರವಣ, ಬಿಲ್ವಾರ್ಚನೆ, ವಿಭೂತಿ / ಭಸ್ಮಾರ್ಚನೆ, ರುದ್ರಾಕ್ಷಿಮಾಲಾಧಾರಣೆ, ಕನಕ ನೇತ್ರ ಧಾರಣೆ, ಮಹಾಮಂಗಳಾರತಿ ಸಹಿತ “ಶ್ರೀಪ್ರದೋಷ ಪೂಜೆ” ನಡೆಯಿತು.
ಶ್ರೀದೇವಳದ ಅರ್ಚಕ ಯರ್ಮುಂಜ ಗೋಪಾಲಕೃಷ್ಣ ಭಟ್ರವರು ಪೂಜಾ ವಿಧಿವಿಧಾನ ನೆರವೇರಿಸಿದರು. ಕೃಷ್ಣಪ್ರಸಾದ್ ಶರ್ಮರವರು ಸಹಕರಿಸಿದರು. ಶ್ರೀರಂಗ ಶಾಸ್ತ್ರಿ ಮಣಿಲ, ಕುತ್ತಿಗದ್ದೆ ಜನಾರ್ದನ ಜೋಯಿಸ, ವಿ.ವಿ ನಾರಾಯಣ ಭಟ್, ರಾಮಕೃಷ್ಣ ಭಟ್ ಮುಳ್ಳುಂಜ, ಸುಬ್ರಹ್ಮಣ್ಯ ಭಟ್ ಕಿಳಿಂಗಾರು, ಗೋಪಾಲಕೃಷ್ಣ ಭಟ್ ಕಂಗಣ್ಣಾರುರವರು ರುದ್ರಪಾರಾಯಣ ನಡೆಸಿದರು. ಶ್ರೀದೇವಳದ ಸಿಬ್ಬಂದಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು. ಭಕ್ತಾದಿಗಳಿಗೆ ಪ್ರಸಾದ ಪಾನಕ ವಿತರಿಸಲಾಯಿತು. ಶ್ರೀ ದೇವಳದಲ್ಲಿ ಪ್ರತೀ ತಿಂಗಳ ಶುಕ್ಲ ಪ್ರದೋಷದಂದು ಸಂಜೆ 7 ಗಂಟೆಗೆ ಶ್ರೀ ಪ್ರದೋಷ ಪೂಜೆ ನಡೆಯಲಿದೆ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.