ಪುತ್ತೂರು: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪುತ್ತೂರು ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಕುಂಬಳೆ ಪಾರ್ತಿಸುಬ್ಬ ವಿರಚಿತ “ಇಂದ್ರನಂದನ ವಾನರೇಂದ್ರ” ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಕು| ರಚನಾ ಚಿದ್ಗಲ್, ಮದ್ದಳೆಯಲ್ಲಿ ಲಕ್ಷ್ಮೀಶ ಪಂಜ, ಚೆಂಡೆಯಲ್ಲಿ ಮಾ| ಅದ್ವೈತ ಕನ್ಯಾನ, ಚಕ್ರತಾಳದಲ್ಲಿ ಕು| ಚೈತಾಲಿ ಕಾಂಚೋಡು ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ(ಶ್ರೀರಾಮ), ಜಯಲಕ್ಷ್ಮಿ ವಿ ಭಟ್(ವಾಲಿ), ಶಾಲಿನಿ ಅರುಣ್ ಶೆಟ್ಟಿ(ಸುಗ್ರೀವ), ಸ್ವಪ್ನಾ ಉದಯ್(ತಾರಾ) ಅರ್ಥದಾರಿಗಳಾಗಿ ಭಾಗವಹಿಸಿದರು. ಸ್ವಪ್ನಾ ಮತ್ತು ಉದಯ್ ಕೊಡಂಕಿರಿ ಕಾರ್ಯಕ್ರಮ ಪ್ರಾಯೋಜಿಸಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಕಲಾವಿದರನ್ನು ಗೌರವಿಸಿದರು. ರಾಧಾಕೃಷ್ಣ ಬೋರ್ಕರ್ ಕಾರ್ಯಕ್ರಮದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿ ವಂದಿಸಿದರು.