ಪುತ್ತೂರು: ಕುಂಬ್ರ ಸಮೀಪದ ಕುರಿಕ್ಕಾರ ತರವಾಡು ಮನೆಯಲ್ಲಿ ಅಷ್ಟಮಂಗಳ ಪ್ರಶ್ನಾಚಿಂತನೆಯು ಏ.16ರಂದು ಆರಂಭಗೊಂಡಿದ್ದು, ಏ.25ರಂದು 9ನೇ ದಿನದ ಅಷ್ಟಮಂಗಳ ಪ್ರಶ್ನಾಚಿಂತನೆ ನಡೆಯಿತ್ತಿದೆ. ದೈವಜ್ಞಾರಾದ ಲಕ್ಷ್ಮೀನಾರಾಯಣ ಮತ್ತು ಸಜೀಶ್ ಮುಳ್ಳೇರಿಯರವರು ಪ್ರಶ್ನಾ ಚಿಂತನೆಯನ್ನು ನಡೆಸಿಕೊಡುತ್ತಿದ್ದಾರೆ.
ಕುರಿಕ್ಕಾರ ತರವಾಡು ಕುಟುಂಬದ ಯಜಮಾನ ಕುಯ್ಯಾರು ವಿಶ್ವನಾಥ ರೈ, ಕುರಿಕ್ಕಾರ ತರವಾಡು ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷ ಆನಂದ ರೈ ಪುಂಡಿಕಾಯಿ, ಸೇರಿದಂತೆ ಕುಟುಂಬದ ಹಿರಿಯ ಮತ್ತು ಕಿರಿಯ ಸದಸ್ಯರುಗಳು ಭಾಗವಹಿಸಿದ್ದರು.