ಕಾಣಿಯೂರು: ಮದುವೆ ಸಂಭ್ರಮದ ಮಧ್ಯೆದಲ್ಲಿಯೂ ಮತದಾನ ಮಾಡುವ ಮೂಲಕ ವರನೊಬ್ಬ ಮಾದರಿಯಾಗಿದ್ದಾರೆ. ಕಡಬ ತಾಲೂಕು ಕಾಯಿಮಣ ಕುಂಡಾಲ ಮೋಹನ ಗೌಡರ ಪುತ್ರ ಅಕ್ಷಯ್ ಕುಮಾರ್ ಮತ್ತು ಎಡಮಂಗಲ ಮಾನ್ಯಡ್ಕ ಆನಂದ ಗೌಡರ ಪುತ್ರಿ ದೀಕ್ಷಿತಾ ಅವರ ವಿವಾಹ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದು, ವರನ ಮನೆಯಲ್ಲಿ ಮದುವೆ ಆರತಕ್ಷತೆಗೆ ಬರುವ ಸಂದರ್ಭದಲ್ಲಿ ಕಾಯಿಮಣ ವಾರ್ಡ್ ನ ಮತಗಟ್ಟೆಗೆ ಆಗಮಿಸಿದ ವರ ಅಕ್ಷಯ್ ತನ್ನ ಹಕ್ಕು ಚಲಾಯಿಸಿದರು.