ಪುತ್ತೂರು: ಆಯ್ದ ಕೊಬ್ಬರಿ ಉಪಯೋಗಿಸಿ ಸಾಂಪ್ರದಾಯಿಕವಾಗಿ ಗಾಣದಿಂದ ತೆಗೆದ ರಾಸಾಯನಿಕ ಕಲಬೆರಕೆಯಿಲ್ಲದ ಪರಿಶುದ್ಧ ಎಣ್ಣೆ ಹಾಗೂ ಇತರ ನೈಸರ್ಗಿಕ ಉತ್ಪನ್ನಗಳ ಮಿಲ್ ‘ಶುದ್ಧಂ ಗಾಣ’ ಮೇ.2ರಂದು ಸರ್ವೆ ಗೋಪಿಕಾ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.
ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಅವರು ನೂತನ ಮಿಲ್ನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಪ್ರಶಾಂತ್ ರೈ ಮನವಳಿಕೆ, ಎ ಜನಾರ್ದನ ರೈ ಸೊರಕೆ, ಆನಂದ ಭಂಡಾರ್ಕರ್ ಹಾಗೂ ಗಂಗಾಧರ ಹೆಗ್ಡೆಯವರು ದೀಪ ಪ್ರಜ್ವಲನಗೊಳಿಸಿದರು.
ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್ಎಸ್ಡಿ, ಸದಸ್ಯ ಕಮಲೇಶ್ ಸರ್ವೆದೋಳಗುತ್ತು, ಮುಂಡೂರು ಸಿ ಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಅಮರನಾಥ ರೈ ಸೊರಕೆ, ಪ್ರವೀಣ್ ರೈ ಪಂಜೊಟ್ಟು, ಶಾಂತರಾಮ ಶೆಟ್ಟಿ, ಅಭಿಲಾಶ್, ಜಿ.ಕೆ ಪ್ರಸನ್ನ ಭಟ್, ಮಹಾಬಲ ರೈ ಮೇಗಿನಗುತ್ತು, ಪ್ರಶಾಂತ್ ರೈ, ಧನ್ಯ ಪಿ ರೈ, ಹರೀಶ್ ಭಂಡಾರಿ, ಮನೋಹರ್ ಅಡ್ಯಂತಾಯ ಬೋಳಂತೂರು, ಆನಂದ್ ಸೂರಂಬೈಲು, ಆಶಾ ಎಸ್ ರೈ ಮನವಳಿಕೆ, ಪ್ರಕಾಶ್ ಶೆಟ್ಟಿ ಅಲದಂಗಡಿ, ಪ್ರತೀಕ್ ಶೆಟ್ಟಿ, ಪ್ರಜ್ವಲ್ ರೈ, ಶ್ರೀರಾಮ ಕಲ್ಲೂರಾಯ ಸರ್ವೆ, ಅಶೋಕ್ ನಾಯ್ಕ ಸೊರಕೆ, ಆನಂದ ಪೂಜಾರಿ ಸರ್ವೆ, ಗೌತಮ್ ರೈ ಸರ್ವೆ, ಬೆಳಿಯಪ್ಪ ಗೌಡ ಸರ್ವೆ, ಲೋಕೇಶ್ ಸರ್ವೆ ಮತ್ತಿತರ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು.
ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದ ಶುದ್ಧಂ ಗಾಣ ಮಿಲ್ನ ಮಾಲಕರಾದ ಪ್ರಸಾದ್ ರೈ ಸೊರಕೆ, ವಿನ್ಯಾ ಪ್ರಸಾದ್ ರೈ ಸೊರಕೆ, ಪ್ರದೀಪ್ ರೈ ಸೊರಕೆ ಹಾಗೂ ವಿರುಣ್ ಪ್ರಸಾದ್ ರೈ ಮನವಳಿಕೆಯವರು, ನಮ್ಮಲ್ಲಿ ಆಯ್ದ ಕೊಬ್ಬರಿ ಉಪಯೋಗಿಸಿ ಸಾಂಪ್ರದಾಯಿಕವಾಗಿ ಗಾಣದಿಂದ ತೆಗೆದ ರಾಸಾಯನಿಕ ಕಲಬೆರಕೆಯಿಲ್ಲದ ಪರಿಶುದ್ಧ ಎಣ್ಣೆ ಹಾಗೂ ಇತರ ನೈಸರ್ಗಿಕ ಉತ್ಪನ್ನಗಳು ಲಭ್ಯವಿದ್ದು ಒಣಕೊಬ್ಬರಿ ಖರೀದಿಯ ಜೊತೆಗೆ ಕೊಬ್ಬರಿಯಿಂದ ಶುದ್ದ ತೆಂಗಿನ ಎಣ್ಣೆ ನೀಡಲಾಗುವುದು ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು.