ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕನ ಸಾವು

0

ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ. ಗೋಪಾಲ ಗೌಡರ ಪುತ್ರ 27ರ ಹರೆಯದ ಜನಾರ್ದನ ನಿನ್ನಿಕಲ್ಲು ಹೃದಯಾಘಾತದಿಂದ ಎ.3ರಂದು ನಿಧನರಾಗಿದ್ದಾರೆ.


ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದ ಇವರು ಕೆಲಸಕ್ಕೆ ರಜೆ ಇದ್ದುದ್ದರಿಂದ ಮನೆಯಲ್ಲೇ ಇದ್ದರು. ಇವರ ತಾಯಿ ತೋಟದ ಕೆಲಸಕ್ಕೆ ಹೋಗಿದ್ದು, ಸಂಜೆ ಬಂದು ನೋಡಿದಾಗ ಇವರು ಮಲಗಿದ್ದಲ್ಲೇ ಮೃತಪಟ್ಟಿರುವುದು ತಿಳಿದು ಬಂದಿದೆ. ಮೃತರು ಶ್ರೀ ದುರ್ಗಾ ಭಜನಾ ಮಂಡಳಿ ದುರ್ಗಾಗಿರಿ ಮತ್ತು ಶ್ರೀ ದುರ್ಗಾ ಯುವಕ ಮಂಡಲ ದುರ್ಗಾಗಿರಿ ಇದರ ಸಕ್ರೀಯ ಸದಸ್ಯರಾಗಿದ್ದು, ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ಮೃತರು ತಾಯಿ ಲಲಿತಾ, ಕಿರಿಯ ಸಹೋದರರಾದ ಹರೀಶ್, ಜಿತೇಂದ್ರ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here