ಚೆನ್ನಾವರ ಉಳ್ಳಾಕುಲು ದೈವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ,ವರ್ಷಾವಧಿ ನೇಮೋತ್ಸವ  

0

ಸವಣೂರು : ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಚೆನ್ನಾವರಗಡಿಗುತ್ತು ಶ್ರೀ ಉಳ್ಳಾಕುಲು ಮಾಡ ,ಗ್ರಾಮ ದೈವ ಅಬ್ಬೆಜಲಾಯ ಹಾಗೂ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಮೇ.1 ಮೊದಲ್ಗೊಂಡು ಮೇ.2ರ ವರೆಗೆ ವರ್ಷಾವಧಿ ನೇಮೋತ್ಸವ ನಡೆಯಿತು.

ದೈವಸ್ಥಾನದಲ್ಲಿ ಮೇ.1ರಂದು ಬೆಳಿಗ್ಗೆ ಗಣಹೋಮ, ನವಕ ಕಲಶ ,ಮಧ್ಯಾಹ್ನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ,ಮಧ್ಯಾಹ್ನ ಮಹಾಪೂಜೆ ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಿತು.

ಸಂಜೆ  ಶ್ರೀ ದೈವಗಳ ಭಂಡಾರ ತೆಗೆದು, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಅಭ್ಯುದಯ ಯುವಕ ಮಂಡಲ ಚೆನ್ನಾವರ, ಯುವಶಕ್ತಿ ಫ್ರೆಂಡ್ಸ್ ಚೆನ್ನಾವರ-ಮಾಡಾವು ಫ್ರೆಂಡ್ಸ್ ಇದರ ಆಶ್ರಯದಲ್ಲಿ ಉಳ್ಳಾಕುಲು ಸೇವಾ ಸಮಿತಿ ಚೆನ್ನಾವರ ಇದರ ಸಹಯೋಗದೊಂದಿಗೆ ಕಾಪು ರಂಗತರಂಗ ಕಲಾವಿದರ ಅಭಿನಯದ ಒರಿಯೆ ನಾಟಕ ಪ್ರದರ್ಶನ ನಡೆಯಿತು.ನಂತರ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ನೇಮೋತ್ಸವ ನಡೆಯಿತು.ಮೇ.2ರಂದು ಬೆಳಿಗ್ಗೆ ಗ್ರಾಮದೈವ ಶ್ರೀ ಅಬ್ಬೆಜಲಾಯ ದೈವ ಹಾಗೂ ಗುಳಿಗ ದೈವದ ನೇಮೋತ್ಸವ ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯ ಭೇಟಿ
ನೇಮೋತ್ಸವಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ,ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಬ್ರಾಯ ಗೌಡ ,ಕಾರ್ಯದರ್ಶಿ ದೀಕ್ಷಿತ್ ಜೈನ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here