ಪುತ್ತೂರು: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಭಾರತ) ಇದರ ರಾಷ್ಟ್ರೀಯ ಮಟ್ಟದ ಫೌಂಡೇಶನ್ ಕಮ್ ಅವಾರ್ಡ್ಸ್ ಡೇ ಸಮ್ಮೇಳನದಲ್ಲಿ ಪುತ್ತೂರು ಪಡ್ನೂರು ಗ್ರಾಮದ ಮತಾವು ನಿವಾಸಿ ಶಿವರಾಮ್ ಎಮ್ ಎಸ್ ಅವರಿಗೆ ’ಪ್ರಖ್ಯಾತ ಇಂಜಿನಿಯರ್’ (eminet engineers) ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೇ.4ರಂದು ಮಹಾರಾಷ್ಟ್ರದ ನಾಸಿಕ್ ಬುದ್ಧ ವಿಹಾರ್ ರಾಡಿಸನ್ ಬ್ಲೂವಿನಲ್ಲಿ ನಡೆದ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ವಿಜಯ್ ಸನಪ್ ಅವರು ಪ್ರದಾನ ಮಾಡಿದರು. ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆಗಳು, ಕಾರ್ಯಕ್ಷಮತೆ ಮತ್ತು ಕೊಡುಗೆಯನ್ನು ಗುರುತಿಸುವ ಗುರುತಾಗಿ ಶಿವರಾಮ್ ಎಮ್ ಎಸ್ ಅವರಿಗೆ “ಪ್ರಖ್ಯಾತ ಇಂಜಿನಿಯರ್” ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಂದರ್ಭ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಭಾರತ) ಇದರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಲ್ಪಾವಿ ರಾವ್, ಉಪಾಧ್ಯಕ್ಷ ರಾಜ್ಕುಮಾರ್, ಪುನಿತ್ ದಿನೇಶ್ಚಂದ್ರ ರೈ, ಕೋಶಾಧಿಕಾರಿ ಶ್ರೀನಿವಾಸನ್, ಪುತ್ತೂರು ಘಟಕದ ಚೇತನ್, ವಿನೋದ್, ಹರೀಶ್ ಎಂ, ಆದರ್ಶ ಕದ್ರಿ ಮತ್ತು ಪ್ರಮೋದ್ ಕುಮಾರ್ ಅವರು ಸಮ್ಮೇಳದಲ್ಲಿ ಭಾಗವಹಿಸಿದರು.