ನೆಲ್ಯಾಡಿ: ಕೋಲ್ಪೆ ಮಖಾಂ ಉರೂಸ್

0

ನೆಲ್ಯಾಡಿ: ಬದ್ರಿಯಾ ಜುಮಾ ಮಸೀದಿ ಕೋಲ್ಪೆ-ನೆಲ್ಯಾಡಿ, ಸಯ್ಯದ್ ಮಲ್ಹರ್ ವಲಿಯುಲ್ಲಾಹಿ(ಖ.ಸಿ.)ದರ್ಗಾ ಶರೀಫ್ ಕೋಲ್ಪೆ ನೆಲ್ಯಾಡಿ ಇದರ ಆಶ್ರಯದಲ್ಲಿ ವರ್ಷಂಪ್ರತಿಯಂತೆ ನಡೆಯುವ ’ಕೋಲ್ಪೆ ಮಖಾಂ ಉರೂಸ್’ ನೆಲ್ಯಾಡಿ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಮೇ.5ರಂದು ಮಗ್ರಿಬ್ ನಮಾಜಿನ ಬಳಿಕ ನಡೆಯಿತು.


ಸಯ್ಯದ್ ಅಬ್ದುಲ್ ಖಾದರ್ ಪೈಝಿ ತಂಙಳ್ ಪಟ್ಟಾಂಬಿ ಕೇರಳ ಅವರು ದುವಾಶೀರ್ವಚನ ನೀಡಿದರು. ಕೋಲ್ಪೆ ಬಿಜೆಎಂನ ಖತೀಬರಾದ ಇಸ್ಹಾಕ್ ಫೈಝಿ ಕುಕ್ಕಿಲ ಅವರು ಉದ್ಘಾಟಿಸಿದರು. ಉಪ್ಪಿನಂಗಡಿ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ್ ಅವರು ಮುಖ್ಯ ಪ್ರಭಾಷಣ ನೀಡಿದರು. ಕೋಲ್ಪೆ ಬಿಜೆಎಂ ಅಧ್ಯಕ್ಷರಾದ ಕೆ.ಕೆ.ಅಬೂಬಕ್ಕರ್ ಅವರು ಅಧ್ಯಕ್ಷತೆ ವಹಿಸಿದ್ದರು. ಕೋಲ್ಪೆ ಬಿಜೆಎಂ ಗೌರವಾಧ್ಯಕ್ಷ ಸಯ್ಯದ್ ಬಿ.ಎಸ್.ಬಾವಾ ತಂಙಳ್ ಕೋಲ್ಪೆ, ಗೋಳಿತ್ತೊಟ್ಟು ಜುಮಾ ಮಸೀದಿ ಅಧ್ಯಕ್ಷರಾದ ಆರೀಫ್ ಎಚ್., ಕೋಲ್ಪೆ ಬಿಜೆಎಂ ಪ್ರಧಾನ ಕಾರ್ಯದರ್ಶಿ ಯು.ಕೆ.ಉಮ್ಮರ್, ಉಪಾಧ್ಯಕ್ಷರಾದ ಇಕ್ಬಾಲ್ ಎಸ್., ಅಬ್ದುಲ್ಲಾ ಕುಂಞಿ ಕೊಂಕೋಡಿ, ಕೋಲ್ಪೆ ಖಲಂದರ್ ಷಾ ದಫ್ ಸಮಿತಿ ಅಧ್ಯಕ್ಷ ಇಕ್ಬಾಲ್ ಕೆ., ದುಬೈಯ ಉದ್ಯಮಿ ಹಮೀದ್ ಶಿರ್ಲಾಲ್, ನೆಲ್ಯಾಡಿಯ ಉದ್ಯಮಿ ರಫೀಕ್ ಸೀಗಲ್, ಕಡಬದ ಉದ್ಯಮಿ ಬಿ.ಎಂ.ಆಲಿ, ಕೋಲ್ಪೆ ಮುಅಲ್ಲಿಂ ನೂರಾನಿಯ ಮದರಸದ ಸದರ್ ಸ್ವಾಬಿರ್ ದಾರಿಮಿ, ಗೋಳಿತ್ತೊಟ್ಟು ಜುಮಾ ಮಸೀದಿ ಖತೀಬರಾದ ಅಬ್ದುರ್ರಹ್ಮಾನ್ ಫೈಝಿ, ನೆಲ್ಯಾಡಿ ಬಿಜೆಎಂ ಖತೀಬರಾದ ಶೌಕತ್ ಆಲೀ ಅಮಾನಿ, ನೆಲ್ಯಾಡಿ ಬಿಜೆಎಂ ಅಧ್ಯಕ್ಷರಾದ ಅಬ್ದುಲ್ ಹನೀಫ್ ಸಿಟಿ, ಕಡಬ ಟೌನ್ ಜೆಎಂ ಕಾರ್ಯದರ್ಶಿ ಅಶ್ರಫ್ ಶೇಡಿಗುಂಡಿ, ಉಳಿತೊಟ್ಟು ಬಿಜೆಎಂ ಅಧ್ಯಕ್ಷ ತಾಜ್ ಶರೀಫ್, ಬೋಳದಬೈಲು ಜೆಎಂ ಅಧ್ಯಕ್ಷ ಬಿ.ಕೆ.ಅಶ್ರಫ್, ಕೊಕ್ಕಡ ಜೆಎಂ ಅಧ್ಯಕ್ಷ ಎಂ.ಎಸ್.ಹೈದರ್, ಕೊಕ್ಕಡ ಅಡ್ಡೈ ಹಸನಿಯ ಚಾರಿಟೇಬಲ್ ಟ್ರಸ್ಟ್‌ನ ಮುದರ್ರಿಸ್ ಶಾಫಿ ಸಖಾಪಿ, ಅಧ್ಯಕ್ಷರಾದ ಹಾಜಿ ಉಮ್ಮರ್ ಪಟ್ಟೂರು, ಮಲ್ಲಿಗೆಮಜಲು ಜೆ.ಎಂ.ಅಧ್ಯಕ್ಷ ಉಮ್ಮರ್ ಬೈಲಂಗಡಿ, ಪಟ್ರಮೆ ಜೆ.ಎಂ.ಅಧ್ಯಕ್ಷ ಹನೀಫ್ ಪಟ್ರಮೆ, ಅರಸಿನಮಕ್ಕಿ ಜೆ.ಎಂ.ಅಧ್ಯಕ್ಷ ಹಾಜಿ ಮೊದಿನ್ ಅಸರ್, ಎಸ್‌ಕೆಎಸ್‌ಎಸ್‌ಎಫ್ ಕೋಲ್ಪೆ ಘಟಕದ ಅಧ್ಯಕ್ಷ ರಹೀಮ್ ಎಮ್.ಕೆ., ಗೋಳಿತ್ತೊಟ್ಟು ಅನ್ಸಾರುಲ್ ಮುಸ್ಲಿಮೀನ್ ಯಂಗ್‌ಮೆನ್ಸ್ ಅಧ್ಯಕ್ಷ ಅಬ್ದುಲ್ ಜಲೀಲ್ ಎಚ್., ಎಸ್‌ಕೆಎಸ್‌ಎಸ್‌ಎಫ್ ಗೋಳಿತ್ತೊಟ್ಟು ಘಟಕದ ಅಧ್ಯಕ್ಷ ಹನೀಫ್ ಮರ್ಲಾಪು, ಕೊಣಾಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಇ.ಮುಹಮ್ಮದ್ ರಫೀಕ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಎಸ್‌ಕೆಎಸ್‌ಎಸ್‌ಎಫ್ ದಕ್ಷಿಣ ಕನ್ನಡ ಈಸ್ಟ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಜಿ ಕೆ.ಕೆ.ಇಸ್ಮಾಯಿಲ್ ಕೋಲ್ಪೆ ಸ್ವಾಗತಿಸಿದರು. ಶಮೀರ್ ಹರ್ಷದಿ ವಂದಿಸಿದರು. ಕೋಲ್ಪೆ ಬಿ.ಜೆ.ಎಂ.ಕೋಶಾಧಿಕಾರಿ ನಾಸಿರ್ ಸಮರಗುಂಡಿ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ತಬುರ್ರುಕ್ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here