ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಭಕ್ತಾಧಿಗಳ ಸಭೆ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಆಡಳಿತಾಧಿಕಾರಿ ಗೋಪಾಲ.ಕೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜೀರ್ಣೋದ್ಧಾರ, ಶಿಲಾನ್ಯಾಸ ಹಾಗು ಕರ ಸೇವೆಯ ಬಗ್ಗೆ ಸಮಗ್ರ ಚರ್ಚೆ ನಡೆದು ಆಲಂಕಾರು,ಕುಂತೂರು,ಪೆರಾಬೆ,ಹಳೆನೇರೆಂಕಿ ಗ್ರಾಮಗಳ ಬೈಲುವಾರು ಸಮಿತಿ ರಚನೆ ಮಾಡಿ ಆಯಾಯ ಭಾಗದ ಪ್ರಮುಖರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಈ ಸಮಿತಿಗಳ ಮೂಲಕ ದೇವಸ್ಥಾನದ ಅಮಂತ್ರಣ ಪತ್ರಿಕೆ ಹಾಗು ಜೀರ್ಣೋದ್ಧಾರಕ್ಕೆ ಭಕ್ತಾಧಿಗಳಿಂದ ಕರಸೇವೆ ಹಾಗು ಧನ ಸಂಪನ್ಮೂಲ ಗಳನ್ನು ಬೈಲುವಾರಿ ಸಮಿತಿಗಳ ಮೂಲಕ ಕ್ರೋಡಿಕರಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಭಾಗೀರಥಿ ಮುರುಳ್ಯಮಾಜಿ ಸಚಿವ ಅಂಗಾರ ಎಸ್,ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಧಾರ್ಮಿಕ ಪರಿಷತ್ ನ ಸದಸ್ಯರಾದ ಮಲ್ಲಿಕಾ ಪಕಳ,ಸೇರಿದಂತೆ ಸೀಮೆಯ ದೇವಸ್ಥಾನ ಹಾಗು ದೇವಸ್ಥಾನದ ಪ್ರಮುಖರನ್ನು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅಮಂತ್ರಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ ದೇವಸ್ಥಾನದ ಆಡಳಿತಾಧಿಕಾರಿ ಗೋಪಾಲ.ಕೆ ಯವರು ಮಾತನಾಡಿ ಮೆ.23 ಗುರುವಾರ ಕರ್ಕಾಟಕ ಲಗ್ನದಲ್ಲಿ ಬೆಳಿಗ್ಗೆ 10:30 ಕ್ಕೆಶಿಲಾನ್ಯಾಸ ಕಾರ್ಯಕ್ರಮ ನೇರವೆರಲಿದ್ದು
ಬಿ.ಜೆ.ಪಿ ನೇತೃತ್ವದ ಹಿಂದಿನ ರಾಜ್ಯ ಸರಕಾರದ ಸಚಿವರಾಗಿದ್ದ ಅಂಗಾರ ಎಸ್ ರವರ ಶಿಪಾರಸ್ಸಿನಲ್ಲಿ ಬಿಡುಗಡೆಗೊಂಡ ಅಂದಾಜು 25 ಲಕ್ಷ ಅನುದಾನದಲ್ಲಿ ದೇವಸ್ಥಾನದ ಗರ್ಭಗುಡಿಯ ಅಡಿಪಾಯ ನಿರ್ಮಾಣ ಮಾಡುವುದಾಗಿ ತಿಳಿಸಿ ನಂತರದ ಜೀರ್ಣೋದ್ಧಾರದ ಕೆಲಸಕ್ಕೆ ಊರಪರವೂರ ಭಕ್ತಾಧಿಗಳ ತನು,ಮನ,ಧನದ ಸಹಕಾರದೊಂದಿಗೆ ಜೀರ್ಣೋದ್ಧಾರ ಕೆಲಸ ಕಾರ್ಯ ನೇರವೆರಲಿದ್ದು ಭಗವದ್ಬಕ್ತರಾದ ತಾವೆಲ್ಲರೂ ಶ್ರೀ ದೇವಿಯ ಜೀರ್ಣೋದ್ಧಾರ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿದರು.ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಗೋಪಾಲ ಕೃಷ್ಣ ಪಡ್ಡಿಲ್ಲಾಯ,ಪೂವಪ್ಪ ನಾಯ್ಕ್ ಶಾಂತಿಗುರಿ, ದಾಮೋದರ ಗೌಡ ಕಕ್ವೆ,ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರುಗಳಾದ ಶೀನಪ್ಪ ಕುಂಬಾರ,ಲೀಲಾವತಿ ಸರ್ವೆದಬೈಲು ಸೇರಿದಂತೆ ಹಲವು ಮಂದಿ ಊರಪರವೂರ ಭಕ್ತಾಧಿಗಳು ವಿವಿಧ ಸಲಹೆ ಸೂಚನೆ ನೀಡಿದರು.
ದೇವಸ್ಥಾನ ದ ಅರ್ಚಕರಾದ ರಾಘವೇಂದ್ರ ಪ್ರಸಾದ್. ಟಿಯವರು ಪ್ರಾರ್ಥಿಸಿ,ಹರಿಪ್ರಸಾದ್ ರವರು ಸ್ವಾಗತಿಸಿ, ದೇವಸ್ಥಾನದ ಸಿಬ್ಬಂದಿ ವಿನೋದ್ ಧನ್ಯವಾದ ಸಮರ್ಪಿಸಿದರು.
ಮೇ.23 ಗುರುವಾರದಂದು 10:30 ಕ್ಕೆ ಕರ್ಕಾಟಕ ಲಗ್ನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನೇರವೆರಲಿದೆ.