ಎಸ್‌ಎಸ್‌ಎಲ್‌ಸಿಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶಿಷ್ಟ ಸಾಧನೆ – ಸಂಘದ ಆಶ್ರಯದಲ್ಲಿರುವ 14 ಶಿಕ್ಷಣ ಸಂಸ್ಥೆಗಳಲ್ಲಿ ಶೇ.100 ಫಲಿತಾಂಶ ದಾಖಲು

0

ಪುತ್ತೂರು: ಪುತ್ತೂರಿನ ವಿವೇಕಾನಂದ ವಿದ್ಯಾವರ್ದಕ ಸಂಘದ ಆಶ್ರಯದಲ್ಲಿ ಕಾರ್ಯನಿರ್ವಹಿಸಿರುವಂತ 14 ಪ್ರೌಢಶಾಲೆಗಳಲ್ಲಿ ಈ ಸಾಲಿನ ಎಸ್.ಎಸ್‌ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.
ಸಂಘದ ಆಶ್ರಯದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಶ್ರೀರಾಮ ಸೆಕೆಂಡರಿ ಶಾಲೆ ಕಲ್ಲಡ್ಕ, ಶ್ರೀ ರಾಮ ಪ್ರೌಢ ಶಾಲೆ ಪತ್ತೂರು, ಶ್ರೀದೇವಿ ಪ್ರೌಢ ಶಾಲೆ ಪುಣಚ, ಷಣ್ಮುಖ ದೇವ ಪ್ರೌಢ ಶಾಲೆ ಪೆರ್ಲಂಪಾಡಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಜಾಲ್ಸೂರು, ಸರಸ್ವತಿ ಪ್ರೌಢ ಶಾಲೆ ಕಡಬ, ಶ್ರೀಗಜಾನನ ಶಾಲೆ ಈಶ್ವರಮಂಗಲ, ಪ್ರಿಯದರ್ಶಿನಿ ಶಾಲೆ ಬೆಟ್ಟಂಪಾಡಿ, ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ, ಶ್ರೀರಾಮ ಪ್ರೌಢ ಶಾಲೆ ನೆಲ್ಯಾಡಿ, ಇಂದ್ರಪ್ರಸ್ಥ ವಿದ್ಯಾಲಯ ಪ್ರೌಢ ಶಾಲೆ ಉಪ್ಪಿನಂಗಡಿ, ಶ್ರೀರಾಮ ಪ್ರೌಢ ಶಾಲೆ ಸುಲ್ಕೇರಿ ಶಾಲೆಗಳಲ್ಲಿ ಈ ಬಾರಿ ಶೇ.100 ಫಲಿತಾಂಶ ದಾಖಲಾಗಿದೆ. ಶೇ.100 ಫಲಿತಾಂಶ ಪಡೆದ ಶಾಲೆಗಳಲ್ಲಿ ಶೇ.75ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಸಂಸ್ಥೆಯ ವೈಶಿಷ್ಟ್ಯತೆಗಳು:
ವಿವೇಕಾನಂದ ವಿದ್ಯಾವರ್ದಕ ಸಂಘದ ಆಶ್ರಯದಲ್ಲಿ ಕಾರ್ಯನಿರ್ವಹಿಸಿರುವಂತ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕಾರಯುತ ಗುಣಮಟ್ಟದ ಶಿಕ್ಷಣ, ಶಾಲೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಬೋಧನೆ, ಕಲಿಕಾ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ, ಆಪ್ತ ಸಮಾಲೋಚನೆಯ ತರಗತಿ, ಗುಂಪು ಕಲಿಕೆಗೆ ಪ್ರೋತ್ಸಾಹ, ದೈಹಿಕ ಶಿಕ್ಷಣ, ಯೋಗ, ವೃತ್ತಿ ಶಿಕ್ಷಣದ ಮಾಹಿತಿ
ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವಕ್ಕೆ ಪೂರಕ ವಾತಾವರಣವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗುತ್ತಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಕಟಣೆ ತಿಳಿಸಿದೆ.

ಈ ವರ್ಷದ ಫಲಿತಾಂಶ ಅತ್ಯಂತ ಸಂತೋಷ ತಂದಿದೆ. ಇದೊಂದು ಐತಿಹಾಸಿಕ ದಾಖಲೆ. ಪರಿಶ್ರಮಕ್ಕೆ ಸಂದ ಪ್ರತಿಫಲ. ಸಾಧನೆ ಮಾಡಿದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಕೆ. ಶಿಕ್ಷಕ ವೃಂದಕ್ಕೆ ಅಭಿನಂದನೆಗಳು. ಮಾರ್ಗದರ್ಶನ ನೀಡಿದ ಆಡಳಿತ ಸಮಿತಿಗೆ ಕೃತಜ್ಞತೆಗಳು.

-ಡಾ.ಕೆ.ಎಂ ಕೃಷ್ಣ ಭಟ್
ಕಾರ್ಯದರ್ಶಿಗಳು,ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು

LEAVE A REPLY

Please enter your comment!
Please enter your name here