ಕುದ್ಮಾರು:ರಾಜಧನ ಪಾವತಿಸಿ ದೇವಸ್ಥಾನದ ಜೀರ್ಣೋದ್ದಾರಕ್ಕೆ ಮರಳು ಪೂರೈಕೆ-ದಿನೇಶ್ ಮೆದು ವಿರುದ್ಧ ರಾಜಕೀಯ ಒತ್ತಡಕ್ಕೆ ಮಣಿದು ದೂರು-ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದಿಂದ ಸ್ಪಷ್ಟನೆ

0

ಪುತ್ತೂರು:ಕಡಬ ತಾಲೂಕಿನ ಕುದ್ಮಾರು ಗ್ರಾಮದ ನೂಜಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ ನಡೆದ ವಿಚಾರಕ್ಕೆ ಸಂಬಂಧಿಸಿ ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದವರು ಸ್ಪಷ್ಟನೆ ನೀಡಿದ್ದು, ‘ನೂಜಿಯಲ್ಲಿ ಸ್ಥಳೀಯ ದೇವಸ್ಥಾನದ ಜೀರ್ಣೋದ್ದಾರಕ್ಕೆ ಬೇಕಾದ ಮರಳು ಸಂಗ್ರಹಿಸಿದ್ದು,ಇದಕ್ಕಾಗಿ ಗಣಿ ಇಲಾಖೆಯ ಮೂಲಕ ಸರಕಾರಕ್ಕೆ ರಾಜಧನ ಕಟ್ಟಿ ಸಂಗ್ರಹಿಸಲಾಗಿತ್ತು’ ಎಂದು ತಿಳಿಸಿದ್ದಾರೆ.


ಈ ಪ್ರಕರಣದಲ್ಲಿ ಸಂಘದ ಅಧ್ಯಕ್ಷ ದಿನೇಶ್ ಮೆದು ಅವರ ಹೆಸರನ್ನು ಉದ್ದೇಶಪೂರ್ವಕವಾಗಿ,ರಾಜಕೀಯ ಒತ್ತಡಕ್ಕೆ ಮಣಿದು ಸೇರಿಸಿ ದೂರು ದಾಖಲಿಸಿದ್ದಾರೆ.ಇದು ಖಂಡನೀಯ.ದ.ಕ.ಜಿಲ್ಲೆಯಲ್ಲಿ ಮರಳುಗಾರಿಕೆ ಮಾಡಲು ಸರಕಾರಕ್ಕೆ ರಾಜಧನ ಪಾವತಿಸಿ ಮರಳುಗಾರಿಕೆ ಮಾಡುವವರ ಸಂಘದ ಅಧ್ಯಕ್ಷರಾಗಿ ದಿನೇಶ್ ಮೆದು ಅವರು ಕೆಲಸ ಮಾಡುತ್ತಿದ್ದಾರೆ.ಇಂತಹ ಘಟನೆ ಅಧಿಕೃತವಾಗಿ ಮರಳುಗಾರಿಕೆ ಮಾಡುವವರಿಗೆ ಹಿನ್ನಡೆ ಉಂಟು ಮಾಡುವ ಕೃತ್ಯವಾಗಿದೆ.ದಿನೇಶ್ ಮೆದು ಅವರು ಸಂಘದ ಅಧ್ಯಕ್ಷರಾಗಿ ಸಲಹೆ, ಸಹಕಾರ ನೀಡುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಳ್ಳಿಪ್ಪಾಡಿ, ಉಪಾಧ್ಯಕ್ಷ ಚರಣ್ ಜುಮಾದಿಗುಡ್ಡೆ,ಕೋಶಾಧಿಕಾರಿ ಸುರೇಶ್ ಕುಂಡಡ್ಕ, ಪದಾಧಿಕಾರಿಗಳಾದ ಮೋನು ಪಿಲಿಗೂಡು, ಪಿ.ಪಿ ಎಲಿಯಾಸ್ ಕಡಬ, ಪ್ರವೀಣ್ ಆಳ್ವ ಮಂಗಳೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here