ಗುಣಮಟ್ಟದ ಶಿಕ್ಷಣ, ದಾಖಲೆಯ ಫಲಿತಾಂಶ- ಹೆಣ್ಮಕ್ಕಳ ಪಾಲಿನ ಭರವಸೆಯ ವಿದ್ಯಾಕೇಂದ್ರ- ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು

0

ಪುತ್ತೂರು: ಮಹಿಳಾ ಶಿಕ್ಷಣದ ದೂರದೃಷ್ಟಿ ಕನಸುಗಳೊಂದಿಗೆ ಕುಂಬ್ರದಲ್ಲಿ ಪ್ರಾರಂಭಗೊಂಡ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಎರಡು ದಶಕಗಳನ್ನು ದಾಟಿ ರಾಜ್ಯದ ಹೆಸರಾಂತ ಮಹಿಳಾ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ.


ಕೇವಲ 8 ವಿದ್ಯಾರ್ಥಿನಿಯರಿಂದ ಆರಂಭಗೊಂಡ ಸಂಸ್ಥೆಯಲ್ಲಿ ಇಂದು ಸಾವಿರಾರು ವಿದ್ಯಾರ್ಥಿನಿಯರು ವಿದ್ಯಾರ್ಜನೆಗೈಯುತ್ತಿದ್ದಾರೆ. ಪದವಿ ವಿಭಾಗದಲ್ಲಿ ಬಿ.ಕಾಂ, ಬಿ.ಎ ಶರೀಅತ್ ಶಿಕ್ಷಣದೊಂದಿಗೆ, ಪದವಿಪೂರ್ವ ವಿಭಾಗದಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಶರೀಅತ್‌ನೊಂದಿಗೆ ಅಲ್ ಮಾಹಿರ ಶರೀಅ ಪದವಿ ವಿಭಾಗ, ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಟಿ.ಟಿ.ಐ) ವಿಭಾಗಗಳು ಕಾರ್ಯಾಚರಿಸುತ್ತಿವೆ.
ಇದೀಗ ಬೆಳಿಯೂರುಕಟ್ಟೆ ಮಂಜ ಎಂಬಲ್ಲಿ ಹುಡುಗರಿಗೂ ವಿದ್ಯಾಭ್ಯಾಸ ನೀಡುವ ಮರ್ಕಝ್ ಅಕಾಡೆಮಿ ಆಫ್ ಥಿಯೋಲಜಿ ಎಂಬ ಸಂಸ್ಥೆಯನ್ನು ಆರಂಭಿಸಿದೆ.

ಪಿಯುಸಿಯಲ್ಲಿ ಅಮೋಘ ಫಲಿತಾಂಶ:
ಪದವಿ ವಿಭಾಗದಲ್ಲಿ ಪ್ರತೀ ವರ್ಷ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ವಿದ್ಯಾರ್ಥಿನಿಯರು ಈ ವಿಭಾಗದಲ್ಲಿ ಹಲವಾರು ಪಠ್ಯೇತರ ವಿಚಾರಗಳಲ್ಲೂ ಹೆಚ್ಚಿನ ಪ್ರಾವೀಣ್ಯತೆ ಗಳಿಸಿದ್ದಾರೆ. ಪದವಿಪೂರ್ವ ವಿಭಾಗದಲ್ಲಿ ಸಂಸ್ಥೆಯು ಪ್ರತೀ ವರ್ಷ ಅಮೋಘ ಫಲಿತಾಂಶ ದಾಖಲಿಸುತ್ತಿದ್ದು ಈ ಸಾಲಿನ ಫಲಿತಾಂಶವಂತೂ ಸಂಸ್ಥೆಯ ಯಶಸ್ವಿನ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದಂತಾಗಿದೆ.
ನೂತನವಾಗಿ ಆರಂಭಗೊಂಡ ವಿಜ್ಞಾನ ವಿಭಾಗದ 41 ವಿದ್ಯಾರ್ಥಿನಿಯರಲ್ಲಿ 17 ಮಂದಿ ವಿಶಿಷ್ಟ ಶ್ರೇಣಿ ಮತ್ತು 24 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾದಲ್ಲೂ ಹೆಚ್ಚಿನವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಕಲಾವಿಭಾಗದ ಫಲಿತಾಂಶದಲ್ಲೂ ಸಂಸ್ಥೆ ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದೆ.
ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಜಿಲ್ಲೆಗೆ ಐದು, ಆರನೇ ರ‍್ಯಾಂಕ್ ಹಾಗೂ ತಾಲೂಕಿಗೆ ಆರು ಮತ್ತು ಏಳನೇ ಸ್ಥಾನವನ್ನು ಪಡೆದಿದ್ದು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.

ಶರೀಅತ್ ಶಿಕ್ಷಣ:
ಶರಿಅತ್ ವಿಭಾಗವಂತೂ ಸಮಾಜದ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಶರೀಅತ್ ಕಲಿತ ಸಾವಿರಾರು ವಿದ್ಯಾರ್ಥಿನಿಯರು ಸುಸಂಸ್ಕೃತರಾಗಿ ತಮ್ಮ ಅದಮ್ಯ ಧಾರ್ಮಿಕ ವಿದ್ಯಾಭ್ಯಾಸದ ಮೂಲಕ ಕುಟುಂಬದ ಹೆಮ್ಮೆ ಎನಿಸಿಕೊಂಡಿದ್ದಾರೆ.
ಕುಂಬ್ರ ಮರ್ಕಝುಲ್ ಹುದಾದ ಶರೀಅತ್ ವಿಭಾಗವಂತೂ ರಾಜ್ಯದ ಪ್ರಥಮ ಮಹಿಳಾ ಕಾಲೇಜು ಎಂಬ ಖ್ಯಾತಿ ತಂದುಕೊಟ್ಡಿದೆ. ಮೂರು ವರ್ಷಗಳ ಬಿರುದು ನೀಡುವ ಈ ವ್ಯವಸ್ಥೆ ಕೇರಳ ಕರ್ನಾಟಕದ ಪ್ರಪ್ರಥಮ ವ್ಯವಸ್ಥೆಯಾಗಿದ್ದು ಎಲ್ಲೆಡೆ ಪ್ರಸಿದ್ಧಿ ಪಡೆದಿದೆ.
ಶರೀಅತ್ ಕಲಿಕೆಯೊಂದಿಗೆ ಸ್ಪೋಕನ್ ಇಂಗ್ಲೀಷ್, ಜನರಲ್ ನಾಲೇಜ್ ಮುಂತಾದ ವ್ಯವಸ್ಥೆಗಳೂ ಇಲ್ಲಿದೆ.

ವಿನೂತನ ಸ್ಟಡೀ ಐಸಿಯು:
ಇಲ್ಲಿ ದಾಖಲಾಗಿ ಯಶಸ್ಸು ಗಳಿಸುವ ವಿದ್ಯಾರ್ಥಿನಿಯರು ಕೇವಲ ಉತ್ತಮ ಕಲಿಕಾ ಹಿನ್ನಲೆಯುಳ್ಳವರು ಮಾತ್ರವಲ್ಲ. ಕಲಿಯುವುದರಲ್ಲಿ ತೀರಾ ಹಿನ್ನಡೆಯಲ್ಲಿರುವವರನ್ನೂ ದಾಖಲು ಮಾಡಿಕೊಂಡು ಅವರನ್ನು ವಿಶಿಷ್ಟ ಶ್ರೇಣಿಗೆ ತಲುಪಿಸುವ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗುತ್ತದೆ. ಈ ವ್ಯವಸ್ಥೆಗೆ ದಾಖಲಾಗುವವರನ್ನು ‘ಸ್ಟಡೀ ಐಸಿಯು’ ವಿಭಾಗದಲ್ಲಿ ಸೇರಿಸಿ ನಿರಂತರವಾಗಿ ಅಭ್ಯಾಸ ನೀಡಲಾಗುತ್ತದೆ. ಮುಂದೆ ಅವರು ನಿರೀಕ್ಷೆಗೂ ಮೀರಿದ ಅಂಕ ಪಡೆದು ಸಾಧನೆ ಮಾಡುತ್ತಿದ್ದಾರೆ.

ವಿಶೇಷ ನಿಗಾ:
ಅದೇ ರೀತಿ ಮೊಬೈಲ್ ದುರ್ಬಳಕೆ ಹಾಗೂ ಅದರ ಅನಾಹುತಗಳ ಬಗ್ಗೆ ತಿಳಿಸಿಕೊಡುವುದಲ್ಲದೇ ಮೊಬೈಲ್ ಬಳಕೆಯ ಪರಿಣಾಮ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿನಿಯರನ್ನು ಪತ್ತೆ ಮಾಡಿ ಅವರನ್ನು ಕಲಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡುವುದಕ್ಕಾಗಿ ‘ಸಿಸಿಯು ಘಟಕ’ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಾಲೇಜಿಗೆ ಗೈರಾಗುವ ವಿದ್ಯಾರ್ಥಿನಿಯರ ಬಗ್ಗೆ ನಿಗಾ ವಹಿಸಿ ಅವರ ಪೋಷಕರನ್ನು ಅಂದಿನ ದಿನವೇ ಸಂರ್ಕಿಸುವ ವ್ಯವಸ್ಥೆಯೂ ಇಲ್ಲಿದೆ. ವಿದ್ಯಾರ್ಥಿನಿಯರ ಸ್ಕೂಲ್ ಬ್ಯಾಗ್‌ನ್ನು ಆಗಾಗ ತಪಾಸಣೆ ನಡೆಸುವ ಮೂಲಕ ಎಲ್ಲ ವಿಧದಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಪಠ್ಯೇತರ ಚಟುವಟಿಕೆ:
ಪಠ್ಯೇತರ ಚಟುವಟಿಯಲ್ಲೂ ವಿದ್ಯಾರ್ಥಿನಿಯರು ತೊಡಗಿಸಿಕೊಳ್ಳುತ್ತಿದ್ದು ಪೂರಕ ವ್ಯವಸ್ಥೆಗಳನ್ನು ಸಂಸ್ಥೆ ಮಾಡಿಕೊಡುತ್ತಿದೆ.
ಮೋಟಿವೇಟರ್‌ಗಳಿಂತ ತರಗತಿಗಳು, ಅದ್ಯಯನ ಶಿಬಿರಗಳು, ದೈಹಿಕ, ಮಾನಸೀಕ ಉನ್ನತಿಯ ಮಾರ್ಗದರ್ಶನಗಳು, ಆರೋಗ್ಯ ಶಿಬಿರಗಳು ಆಗಾಗ ನಡೆಸಲ್ಪಡುತ್ತದೆ. ಕ್ರೀಡೆಯಲ್ಲೂ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅಭ್ಯಾಸವನ್ನು ನೀಡಲಾಗುತ್ತದೆ

ಪರಿಶ್ರಮದ ಫಲ:
ಇವೆಲ್ಲದರ ಹಿಂದೆ ಸಂಸ್ಥೆಯ ಆಡಳಿತ ಮಂಡಳಿತ ಪ್ರೋತ್ಸಾಹ, ಪ್ರಾಂಶುಪಾಲರು, ಉಪನ್ಯಾಸಕಿಯರು, ಸಿಬ್ಬಂದಿಗಳ ಶ್ರಮದಿಂದ ಸಾಧ್ಯವಾಗಿದೆ. ಉಪನ್ಯಾಸಕಿಯರು ಪ್ರತೀ ಹಂತದಲ್ಲೂ ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಗೆ ಕಠಿಣ ಪರಿಶ್ರಮ ಪಡುತ್ತಿದ್ದಾರೆ.

ಅತ್ಯುತ್ತಮ ಸೌಕರ್ಯ, ಹಾಸ್ಟೆಲ್ ವ್ಯವಸ್ಥೆ:
ಇಲ್ಲಿ ಉತ್ತಮ ವಸತಿ ಸೌಕರ್ಯವೂ ಇರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಅನೇಕ ವಿದ್ಯಾರ್ಥಿನಿಯರು ಇಲ್ಲಿ ಬಂದು ಕಲಿಯುತ್ತಿದ್ದಾರೆ. ಕೇರಳದ ವಿದ್ಯಾರ್ಥಿನಿಯರೂ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಅತ್ಯಂತ ಗುಣಮಟ್ಟದ ಶಿಷ್ಟಾಚಾರಗಳನ್ನು ಅಳವಡಿಸಿಕೊಳ್ಳಲಾಗಿದೆ. ಜೀವನದ ಸಮಗ್ರ ಮೌಲ್ಯಗಳನ್ನು ಇಲ್ಲಿ ನಿರಂತರ ಕಲಿಸಿಕೊಡಲಾಗುತ್ತದೆ.
ಪಾಕಾಶಾಸ್ತ್ರ, ಟೈಲರಿಂಗ್ ಕಲಿಕೆ, ವ್ಯಾಯಾಮ, ವಾಕಿಂಗ್ ಮುಂತಾದ ಎಲ್ಲವೂ ಇಲ್ಲಿದೆ.
ವಿದ್ಯಾರ್ಥಿನಿಯರಿಗೆ ಇಸ್ಲಾಮಿ ಚೌಕಟ್ಟಿನೊಳಗಡೆ ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಉತ್ತಮ ಗುಣಮಟ್ಟದ ಕಲಿಕೆ ಇಲ್ಲಿ ಸಿಗುತ್ತಿದೆ.

ಒಟ್ಟಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಕಲಿತು ಉನ್ನತ ವಿಧ್ಯೆಯನ್ನು ಗಳಿಸಿ ಸಮಾಜದ ಭದ್ರ ಬುನಾದಿಗಳಾಗಬೇಕು. ಈಗಾಗಲೇ ಹಲವು ಸರಕಾರಿ, ಖಾಸಗಿ, ವಿದೇಶಗಳಲ್ಲಿ ಉನ್ನತ ಜಾಬ್‌ನಲ್ಲಿ ಇಲ್ಲಿ ಕಲಿತ ವಿದ್ಯಾರ್ಥಿನಿಯರು ಕೆಲಸ ನಿರ್ವಹಿಸುತ್ತಿದ್ದಾರೆ. ಉತ್ತಮ ದೂರ ದೃಷ್ಟಿಯುಳ್ಳ ಆಡಳಿತ ಮಂಡಳಿಯು ಎಲ್ಲ ವಿಧದಲ್ಲೂ ಸಕ್ರೀಯವಾಗಿ ಕಾರ್ಯಾಚರಿಸುತ್ತಿದ್ದು ಮುಂದೆ ಹಲವು ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸುವ ಉದ್ದೇಶದಲ್ಲಿದೆ ಎಂದು ಮೀಡಿಯಾ ಮರ್ಕಝ್ ಕುಂಬ್ರ ತಿಳಿಸಿದೆ.

ನಮ್ಮ ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣದಲ್ಲಿ ಅಗ್ರ ಪಂಕ್ತಿಯಲ್ಲಿದೆ. ವಿದ್ಯಾರ್ಥಿನಿಯರ ಸರ್ವಾಂಗೀಣ ಅಭಿವೃದ್ದಿಗಾಗಿ ಸಂಸ್ಥೆ ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿದ್ದು ಯಶಸ್ಸು ಸಾಧಿಸಿದೆ. ದಾಖಲಾತಿ ಯಶಸ್ವಿಯಾಗಿ ನಡೆಯುತ್ತಿದ್ದು ಸಮಾಜದ ಹೆಮ್ಮೆಯ ವಿದ್ಯಾಸಂಸ್ಥೆಯಾಗಿ ಮರ್ಕಝುಲ್ ಹುದಾ ಬೆಳೆದು ನಿಂತಿದ್ದು ಅತೀವ ಸಂತೋಷ ತಂದಿದೆ.

-ಸಂದ್ಯಾ ಪಿ., ಪ್ರಾಂಶುಪಾಲರು, ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ಕಾಲೇಜು ಕುಂಬ್ರ

ಮಹಿಳೆಯರ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಂತಹ ಒಂದು ಶಿಕ್ಷಣ ಸಂಸ್ಥೆಯಾಗಿದೆ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜು. ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರಿಗೆ ಅತೀ ಅಗತ್ಯವಾಗಿರುವಂತಹ 3 ವರ್ಷದ ಪದವಿ ಶಿಕ್ಷಣವನ್ನು ನಮ್ಮ ಸಂಸ್ಥೆಯು ನೀಡುತ್ತಿದ್ದು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಏಕ ಕಾಲದಲ್ಲಿ ಕಲಿಯುವ ಅವಕಾಶವನ್ನು ನಮ್ಮ ಸಂಸ್ಥೆ ಮಾಡಿಕೊಡುತ್ತಿದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ನಮ್ಮ ಸಂಸ್ಥೆಯಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ ವಿದ್ಯಾರ್ಥಿನಿಯರು ವಿವಿಧ ಊರುಗಳಲ್ಲಿ ಬೇರೆ ಬೇರೆ ವಿಭಾಗಳಲ್ಲಿ ಉದ್ಯೋಗಿಗಳಾಗಿ ಸೇವೆ ಸಲ್ಲಿಸುತ್ತಿರವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ . ಮುಂದಿನ ವರ್ಷದ ಪದವಿ ವಿಭಾಗದ ದಾಖಲಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದ್ದು ದಾಖಲಾತಿ ಬಯಸುವ ವಿದ್ಯಾರ್ಥಿನಿಯರು ಆದಷ್ಟು ಬೇಗ ನಮ್ಮ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದು.

-ಮನ್ಸೂರ್ ಕಡಬ, ಪ್ರಾಂಶುಪಾಲರು, ಪದವಿ ವಿಭಾಗ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ

ಮೂರು ವರ್ಷಗಳ ಶರೀಅತ್ ಕೋರ್ಸ್ ಸಮಾಜಕ್ಕೆ ಅತ್ಯಂತ ಫಲಪ್ರದವಾದ ವಿಭಾಗವಾಗಿದ್ದು ಪ್ರತೀ ವರ್ಷ ಹೆಚ್ಚಿನ ದಾಖಲಾತಿ ಇಲ್ಲಿ ನಡೆಯುತ್ತಿದೆ.
“ಅಲ್ ಮಾಹಿರಾ” ಹೆಸರಿನ ಪದವಿ ನೀಡುವ ಈ ಕೋರ್ಸ್ ಜೀವನದ ಸಂಪೂರ್ಣ ಮೌಲ್ಯವನ್ನು ಕಲಿಸುವ ಶ್ರೇಷ್ಠ ವ್ಯವಸ್ಥೆಯಾಗಿದೆ.
-ಮುಹಮ್ಮದ್ ಸ ಅದಿ ವಳವೂರು, ಪ್ರಾಂಶುಪಾಲರು ಮರ್ಕಝುಲ್ ಹುದಾ ಮಹಿಳಾ ಶರೀಅತ್ ವಿಭಾಗ

LEAVE A REPLY

Please enter your comment!
Please enter your name here