ಇಂಡಿಯಾ ಸೊಶಿಯಲ್ ಆ್ಯಂಡ್‌ ಕಲ್ಚರಲ್ ಸೆಂಟರ್ ಅಬುಧಾಬಿ ಅಧ್ಯಕ್ಷರಾಗಿ ಮಿತ್ರಂಪಾಡಿ ಜಯರಾಮ್‌ ರೈ

0

ಪುತ್ತೂರು:ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿಯಲ್ಲಿರುವ, ವಿಶ್ವದಲ್ಲೇ ಅನಿವಾಸಿ ಭಾರತೀಯರ ಅತ್ಯಂತ ದೊಡ್ಡ ಸಂಘಟನೆಯಾಗಿರುವ ‘ಇಂಡಿಯಾ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್’ನ 2024-2025ನೇ ಸಾಲಿನ ಅಧ್ಯಕ್ಷ ಸ್ಥಾನಕ್ಕೆ ಮೇ .13ರಂದು ನಡೆದ ಚುನಾವಣೆಯಲ್ಲಿ ಮಿತ್ರಂಪಾಡಿ ಜಯರಾಮ್ ರೈಯವರು ಬಹುಮತಗಳೊಂದಿಗೆ ಜಯಶೀಲರಾಗಿದ್ದಾರೆ.

ಅಬುಧಾಬಿಯಲ್ಲಿರುವ ಅನಿವಾಸಿ ಭಾರತೀಯರ ಭವ್ಯ ಸೌಧ ‘ಇಂಡಿಯಾ ಸೋಶಿಯಲ್ ಆ್ಯಂಡ್‌ ಕಲ್ಚರಲ್ ಸೆಂಟರ್(ಐಎಸ್‌ಸಿ)’,ಕಳೆದ 57 ವರ್ಷಗಳಿಂದ ಕಾರ್ಯೋನ್ಮುಖವಾಗಿರುವ ವಿಶ್ವದಲ್ಲೇ ಅನಿವಾಸಿ ಭಾರತೀಯರ ಅತ್ಯಂತ ದೊಡ್ಡದಾಗಿರುವ ಸಂಘಟನೆಯಾಗಿದೆ.ಭಾರತೀಯ ವೈವಿಧ್ಯಮಯ ಕಲೆ ಸಂಸ್ಕೃತಿ, ಕಲಾಪ್ರಾಕಾರಗಳಿಗೆ ಇಲ್ಲಿ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ.ಈಗಾಗಲೇ ನೂರಾರು ಕಲಾ ಪ್ರತಿಭೆಗಳು ಹೊರಹೊಮ್ಮಿದ್ದು, ವಿಶ್ವದ ವಿವಿಧ ಕಡೆಗಳಿಂದ ಪ್ರಖ್ಯಾತ ಕಲಾವಿದರು ಕಾರ್ಯಕ್ರಮ ನೀಡಿರುವ ಪವಿತ್ರ ವೇದಿಕೆ ಮತ್ತು ಎರಡು ಸಾವಿರ ಪ್ರೇಕ್ಷಕರು ಆಸೀನರಾಗುವ ಹವಾನಿಯಂತ್ರಿತ ಸಭಾಂಗಣ ಮತ್ತು ಮುನ್ನೂರು ಮಂದಿ ಆಸೀನರಾಗುವ ಎರಡು ಕಿರಿಯ ಸಭಾಂಗಣಗಳನ್ನು ಹೊಂದಿದೆ.ಈಜುಕೊಳ,ಜಿಮ್,ಒಳಾಂಗಣ ಕ್ರೀಡಾ ವ್ಯವಸ್ಥೆ, ಉಪಹಾರ ಮಂದಿರದ ವ್ಯವಸ್ಥೆ ಇದ್ದು ಎಂಟು ಸಾವಿರ ಮಂದಿ ಸೌಲಭ್ಯ ಪಡೆಯುತ್ತಿದ್ದಾರೆ.ಐಎಸ್‌ಸಿಯಲ್ಲಿ ಎರಡು ಸಾವಿರ ಸದಸ್ಯರಿದ್ದು, ಬೃಹತ್ ಉದ್ಯಮಿಗಳು, ವೃತ್ತಿಪರ ಗಣ್ಯರು ಆಡಳಿತ ಮಂಡಳಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.ಪ್ರತಿವರ್ಷ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆಸಲಾಗುತ್ತಿದೆ.2018-19ನೇ ಸಾಲಿನಲ್ಲಿ ಉಪಾಧ್ಯಕ್ಷರಾಗಿ ಬಹುಮತದಿಂದ ಮಿತ್ರಂಪಾಡಿ ಜಯರಾಮ್ ರೈ ಆಯ್ಕೆಯಾಗಿದ್ದರು.ಅಂದಿನ ದಿನಗಳಲ್ಲಿ ಇವರು ಏಕೈಕ ಕನ್ನಡಿಗರಾಗಿದ್ದು, ತುಳುನಾಡಿಗೆ, ಕರ್ನಾಟಕಕ್ಕೆ ಸಂದ ಗೌರವವಾಗಿತ್ತು.


ಪುತ್ತೂರಿನ ಕೆದಂಬಾಡಿ ಗ್ರಾಮದ ಪ್ರಗತಿ ಪರ ಕೃಷಿಕರಾಗಿದ್ದ ದಿ|ಮಿತ್ರಂಪಾಡಿ ಚೆನ್ನಪ್ಪ ರೈ ಮತ್ತು ದಿ|ಡಿಂಬ್ರಿ ಗುತ್ತು ಸರಸ್ವತಿ ರೈಯವರ ಪುತ್ರನಾಗಿರುವ ಜಯರಾಮ ರೈಯವರು ಬೆಂಗಳೂರಿನ ಯುವ ಬಂಟ ಸಮಾಜದ ಅಧ್ಯಕ್ಷರಾಗಿ, ಕನ್ನಡ ಮತ್ತು ತುಳುವೆರೆಂಕುಳು, ಲಯನ್ಸ್ ಕ್ಲಬ್ ಹಾಗೂ ಇನ್ನಿತರ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಮತ್ತು ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದಾರೆ.1999ರಲ್ಲಿ ಕೊಲ್ಲಿರಾಷ್ಟ್ರ ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿಯಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ರೈಯವರು ಬಿನ್ ಫರ್ದಾನ್ ಗ್ರೂಪ್‌ನ ಫೈನಾನ್ಸ್ ಮ್ಯಾನೆಜರ್ ಆಗಿ ಜವಾಬ್ಧಾರಿಯನ್ನು ವಹಿಸಿಕೊಂಡರು.ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವಲ್ಲಿ ರೈಯವರ ಕೊಡುಗೆ ಅಪಾರವಾಗಿದ್ದು ಅಭಿನಂದಿಸಲ್ಪಟ್ಟು ಸಿ.ಎಫ್.ಒ. ಆಗಿ ಎತ್ತರದ ಸ್ಥಾನ ಲಭಿಸಿದ್ದು ಪ್ರಸ್ತುತ ಗೌರವದ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ವೃತ್ತಿಯೊಂದಿಗೆ ಪ್ರವೃತ್ತಿಯಲ್ಲಿ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡಿದ್ದು ತಮ್ಮ ಬಿಡುವಿನ ಸಮಯವನ್ನು ಸಮಾಜ ಸೇವೆಗಾಗಿ ಮೀಸಲಾಗಿಟ್ಟಿದ್ದಾರೆ.ಇಂಡಿಯ ಸೋಶಿಯಲ್ ಸೆಂಟರ್ ಟೋಸ್ಟ್ ಮಾಸ್ಟರ್ ಇಂಟರ್‌ನ್ಯಾಷನಲ್ ಅಬುಧಾಬಿ ಇದರ ಸ್ಥಾಪಕ ಅಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ಉತ್ತಮ ಸೇವೆ ಸಲ್ಲಿಸಿರುವ ಇವರು ಇಂಡಿಯಾ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್‌ನ ಗೌರವಾನ್ವಿತ ಲೆಕ್ಕ ಪರಿಶೋಧಕರಾಗಿ, ಚೀಫ್ ಪೋಲಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸಿ ಜನಪ್ರಿಯತೆ ಪಡೆದಿದ್ದಾರೆ.ಇದರ ಫಲವಾಗಿ ಅತ್ಯಧಿಕ ಬಹುಮತದಿಂದ 2018-19ನೇ ಸಾಲಿನ ಉಪಾಧ್ಯಕ್ಷರಾಗಿ ಜಯಗಳಿಸಿ ತಮ್ಮ ಅಧಿಕಾರದ ಅವಧಿಯಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಭಾರತ ಮತ್ತು ಅರಬ್ ಸಂಯುಕ್ತ ಸಂಸ್ಥಾನದ ಸಾಂಸ್ಕೃತಿಕ ಬಾಂಧವ್ಯವನ್ನು ಉತ್ತುಂಗಕ್ಕೆ ಏರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.ಯು.ಎ.ಇ.ಯಲಿ ಅನಿವಾಸಿ ಭಾರತೀಯ ಸಂಘಟನೆಗಳು ಭಾರತೀಯ ಸಂಸ್ಕೃತಿ ಆಚಾರ ವಿಚಾರಗಳನ್ನು ಗಲ್ ನಾಡಿನಲ್ಲಿ ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿದೆ.ಇದೇ ರೀತಿಯಲ್ಲಿ ಕರ್ನಾಟಕ ಪರ ಸಂಘಟನೆಗಳು ಕನ್ನಡ, ತುಳು ಕೊಂಕಣಿ, ಬ್ಯಾರಿ ಮತ್ತು ಕೊಡವ ಭಾಷಾ ಚಟುವಟಿಕೆಗಳನ್ನು ನಡೆಸಿಕೊಂಡು ಕಾರ್ಯೋನ್ಮುಖವಾಗಿವೆ.ಇಂತಹ ಸಂಘಟನೆಗಳಿಗೆ ರೈಯವರು ಸದಾ ಬೆಂಬಲ, ಪ್ರೋತ್ಸಾಹ ಮತ್ತು ಪ್ರಾಯೋಜಕತ್ವ ನೀಡುತ್ತಾ ಬರುತ್ತಿದ್ದಾರೆ.


ರೈಯವರು ಉತ್ತಮ ರಂಗ ಕಲಾವಿದರೂ ಆಗಿದ್ದು ಯು.ಎ.ಇ.ಯಲ್ಲಿ ನಡೆಯುವ ಕನ್ನಡ ಮತ್ತು ತುಳು ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಐತಿಹಾಸಿಕ ಸಾಮಾಜಿಕ ನಾಟಕಗಳಲ್ಲಿ ಮುಖ್ಯವಾಗಿ ದೇವ ಪೂಂಜ ಮತ್ತು ಸಂಗೊಳ್ಳಿ ರಾಯಣ್ಣ ಪಾತ್ರದ ಮೂಲಕ ಮೂಲಕ ಗಮನ ಸೆಳೆದಿದ್ದಾರೆ.ಇವರು ರಚಿಸಿ ನಿರ್ದೇಶಿಸಿ, ನಟಿಸಿರುವ ಮಂತ್ರಿಮಂಡಲ ಮತ್ತು ಅಪ್ಪೆನ ತ್ಯಾಗ ನಾಟಕಗಳನ್ನು ವೀಕ್ಷಿಸಿರುವ ಯು.ಎ.ಇ.ಯ ಹಿರಿಯ ಉದ್ಯಮಿ ಡಾ|ಬಿ.ಅರ್.ಶೆಟ್ಟಿಯವರು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.ದುಬಾಯಿಯಲ್ಲಿ ನಡೆದ ಯು.ಎ.ಇ. ಬಂಟ್ಸ್ ಸ್ನೇಹಮಿಲನ, ತುಳುಕೂಟ, ಕರ್ನಾಟಕ ಸಂಘ ಮತ್ತು ಬದಿಯಡ್ಕದಲ್ಲಿ ನಡೆದ ವಿಶ್ವ ಸಮ್ಮೇಳನದ ವೇದಿಕೆಗಳಲ್ಲಿ ಜಯರಾಮ ರೈಯವರನ್ನು ಸನ್ಮಾನಿಸಿ ಗೌರವಿಸಲಾಗಿದೆ.ಯು.ಎ.ಇ.ಯಲ್ಲಿ ನಡೆಯುವ ಸ್ನೇಹ ಮಿಲನ, ವಿಹಾರ ಕೂಟ, ಕ್ರೀಡಾ ಕೂಟ, ಪೂಜಾ ಸಮಾರಂಭ, ಸಾಹಿತ್ಯ ಸಮ್ಮೇಳನಗಳಿಗೆ ಸಹಾಯ ಹಸ್ತ ನೀಡುವುದರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡು ಸಮಾರಂಭಗಳ ಯಶಸ್ಸಿನಲ್ಲಿ ಇವರು ಭಾಗಿಯಾಗಿರುತ್ತಾರೆ.ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗೆ ಸ್ಥಾಪನೆಯಾಗಿರುವ ಯಕ್ಷ ದ್ರುವ ಪಟ್ಲ -ಂಡೇಶಷನ್ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು, ತಮ್ಮ ಹುಟ್ಟೂರಿನಲ್ಲಿಯೂ ವಿದ್ಯಾಸಂಸ್ಥೆಗಳಿಗೆ, ದೇವಸ್ಥಾನಗಳಿಗೆ ದೇಣಿಗೆ, ಬಡ ವಿದ್ಯಾರ್ಥಿಗಳು ಮತ್ತು ನೊಂದವರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ.


2022ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಇಂಟರ್‌ನ್ಯಾಷನಲ್ ಐಕಾನಿಕ್ ಪ್ರಶಸ್ತಿ, ಗಡಿನಾಡ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ, ಗ್ಲೋಬಲ್ ಮೆನ್ ಅವಾರ್ಡ್ ಸಹಿತ ಹಲವು ಪ್ರಶಸ್ತಿ,ಸನ್ಮಾನಗಳನ್ನು ಮುಡಿಗೇರಿಸಿಕೊಂಡಿರುವ ಜಯರಾಮ್ ರೈಯವರು ಡಿಸ್ಟಿಂಗ್ವಿಶ್ ಟೋಸ್ಟ್ ಮಾಸ್ಟರ್ ಮತ್ತು ಟ್ರಿಪಲ್ ಕ್ರೌನ್ ಅವಾರ್ಡ್ ಪುರಸ್ಕೃತರೂ ಆಗಿದ್ದಾರೆ.ಪತ್ನಿ ಶ್ರೀಮತಿ ಆಶಾ ಜೆ.ರೈ,ಪುತ್ರ ತಾರಾನಾಥ ರೈ ಮತ್ತು ಪುತ್ರಿ ಪ್ರಾಂಜಲ ರೈರವರೊಂದಿಗೆ ಜಯರಾಮ ರೈಯವರು ಸುಖೀ ಸಂಸಾರಿಯಾಗಿದ್ದಾರೆ.

ಅಬುಧಾಬಿಯಲ್ಲಿರುವ ಅನಿವಾಸಿ ಭಾರತೀಯರ ಭವ್ಯ ಸೌಧ ‘ಇಂಡಿಯಾ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್(ಐಎಸ್‌ಸಿ)’,ಕಳೆದ 57 ವರ್ಷಗಳಿಂದ ಕಾರ್ಯೋನ್ಮುಖವಾಗಿರುವ, ವಿಶ್ವದಲ್ಲೇ ಅನಿವಾಸಿ ಭಾರತೀಯರ ಅತ್ಯಂತ ದೊಡ್ಡದಾಗಿರುವ ಸಂಘಟನೆಯಾಗಿದೆ.ಐಎಸ್‌ಸಿಯಲ್ಲಿ ಎರಡು ಸಾವಿರ ಸದಸ್ಯರಿದ್ದು,ಬೃಹತ್ ಉದ್ಯಮಿಗಳು, ವೃತ್ತಿಪರ ಗಣ್ಯರು ಆಡಳಿತ ಮಂಡಳಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.ಪ್ರತಿವರ್ಷ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆಸಲಾಗುತ್ತಿದೆ.2018-19ನೇ ಸಾಲಿನಲ್ಲಿ ಮಿತ್ರಂಪಾಡಿ ಜಯರಾಮ್ ರೈ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.ಇದೀಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here