ಎಸ್ ಎಸ್ಎಲ್ ಸಿಯಲ್ಲಿ ಸ್ಕೌಟ್ಸ್ ಗೈಡ್ಸ್ ನ ವಿದ್ಯಾರ್ಥಿಗಳ ಸಾಧನೆ

0

ಪುತ್ತೂರು: ಬಪ್ಪಳಿಗೆಯ ಅಂಬಿಕಾ ಸಿಬಿಎಸ್ಇ ವಿದ್ಯಾಲಯವು 2023-24ರ ಸಾಲಿನಲ್ಲಿ 100% ಫಲಿತಾಂಶವನ್ನು ಪಡೆದುಕೊಂಡಿದೆ.
ಇದರಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ನಾಲ್ಕು ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಮುರ ನಿವಾಸಿಯಾಗಿರುವ ಕೇಶವ ಮತ್ತು ವನಿತಾರವರ ಪುತ್ರ ಜಸ್ವಿತ್ 477 ಅಂಕ (95.4% ), ಸಾಲ್ಮರ ನಿವಾಸಿ ಪದ್ಮಯ್ಯ ಗೌಡ ಮತ್ತು ಜಯಲಕ್ಷ್ಮಿ ಯವರ ಪುತ್ರಿ ಯಶಸ್ವಿ ಸುರುಳಿ 473 ಅಂಕ (94.3%), ಕಲ್ಲಿಮಾರ್ ನ ಸುಧಾಕರ್ ಕೆ. ಪಿ ಮತ್ತು ರೇಷ್ಮಾ ಎಸ್ ನಾಯಕ್ ರವರ ಪುತ್ರ ಶ್ರೀ ಶಾಮ್ ಎಸ್ ನಾಯಕ್ 455 ಅಂಕ (91%)‌ ಮತ್ತು ವಿಟ್ಲದ ಗಿರೀಶ್ ಭಟ್ ಮತ್ತು ಸೌಮ್ಯ ಸಾವಿತ್ರಿ ಎಸ್ ರವರ ಪುತ್ರ ಆತ್ರೇಯ ಭಟ್ ಎ. ಜಿ 450 ಅಂಕ (90%) ಪಡೆಯುವುದರ ಮೂಲಕ ಉತ್ತಮ ಸಾಧನೆಯನ್ನು ಮಾಡಿದ್ದಾರೆ.


LEAVE A REPLY

Please enter your comment!
Please enter your name here