ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಸನ್ಮಾನ

0

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 20 ಅಂಶಗಳ ಸಭೆಯಲ್ಲಿ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಿಇಓ ಹಂಸಾವತಿ ರವರಿಗೆ ಸನ್ಮಾನ ಕಾರ್ಯಕ್ರಮ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಂಧಕರಾದ ತ್ರಿವೇಣಿ ರಾವ್ ವಹಿಸಿ, ನಿವೃತ್ತರಾದ ಸಿಇಒ ಹಂಸಾವತಿ ರವರನ್ನು ಶಾಲು ಹೊದಿಸಿ ಫಲಪುಷ್ಪಗಳೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿ, ನಿವೃತ್ತರ ಕಾರ್ಯವೈಖರಿಯನ್ನು ಅಭಿನಂದಿಸಿ ಹಂಸಾವತಿಯವರ ಸೇವೆಯಿಂದ ಕೊಳ್ತಿಗೆ ಸಹಕಾರ ಸಂಸ್ಥೆಗಳು ಅತ್ಯುತ್ತಮವಾಗಿ ಅಭಿವೃಧ್ದಿ ಹೊಂದಿದ ಬಗ್ಗೆ ಹರ್ಷ ವ್ಯಕ್ತಪಡಿಸಿ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಪುತ್ತೂರು ಮತ್ತು ಕಡಬ ತಾಲೂಕಿನ ಸಹಕಾರಿ ಅಬಿವೃದ್ದಿ ಅಧಿಕಾರಿ ಶೋಭಾ, ಪುತ್ತೂರು ಶಾಖೆಯ ವ್ಯವಸ್ಥಾಪಕ ಹರೀಶ್ ರೈ ನಿವೃತ್ತರಾದ ಸಿಇಓ ಹಂಸಾವತಿ ರವರಿಗೆ ಶುಭಹಾರೈಸಿ ನೂತನ ಸಿಇಓ ಗಿರಿಜಾ ರವರಿಗೆ ಅಭಿನಂದಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರುಗಳಾದ ಶಶಿಕುಮಾರ್ ರೈ ಮತ್ತು ಎಸ್.ಬಿ ಜಯರಾಮ ರೈ ಯವರು ನಿವೃತ್ತರಿಗೆ ಕಳುಹಿಸಿದ ಶುಭಹಾರೈಕೆಯನ್ನು ಸಭೆಯಲ್ಲಿ ತಿಳಿಸಲಾಯಿತು.

ಸನ್ಮಾನಿತ ನಿವೃತ್ತ ಸಿಇಓ ಹಂಸಾವತಿ ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಕೊಳ್ತಿಗೆ ಸಹಕಾರ ಸಂಘದ ನೂತನ ಸಿಇಓ ಗಿರಿಜಾ ಮತ್ತು 2023-24 ನೇ ಸಾಲಿನಲ್ಲಿ ಶೇಕಡಾ ನೂರು ವಸೂಲಾತಿ ಸಾಧನೆ ಮಾಡಿದ ನೆಲ್ಯಾಡಿ ಸಹಕಾರ ಸಂಘದ ದಯಾಕರ ರೈ ಹಾಗೂ ಕಾವು ಸಹಕಾರ ಸಂಘದ ಕೇಶವಮೂರ್ತಿ ರವರನ್ನು ಸಹಕಾರ ಸಂಘಗಳ ಸಹಾಯಕ ನಿಂಧಕರಾದ ತ್ರಿವೇಣಿ ರಾವ್ ಹೂಗುಚ್ಚ ನೀಡಿ ಗೌರವಿಸಿದರು. ಮುಂಡೂರು ಸಹಕಾರಿ ಸಂಘದ ಸಿಇಓ ಜಯಪ್ರಕಾಶ್ ರೈ ಮತ್ತು ಡಿಸಿಸಿ ಬ್ಯಾಂಕಿನ ವಲಯಮೇಲ್ವಿಚಾರಕರಾದ ಶರತ್ ರವರು ಸನ್ಮಾನಿತರಿಗೆ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದರು.

ಈ ಸಮಾರಂಭದಲ್ಲಿ ವಲಯ ಮೇಲ್ವಿಚಾರಕರಾದ ವಸಂತ ಎಸ್, ಪ್ರದೀಪ್, ಮನೋಜ್ ಹಾಗೂ ಪುತ್ತೂರು ಮತ್ತು ಕಡಬ ತಾಲೂಕಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ, ಇರ್ದೆ-ಬೆಟ್ಟಂಪಾಡಿ ಸಹಕಾರ ಸಂಘದ ರಾಮಯ್ಯ ರೈ, ನರಿಮೊಗರು ಸಂಘದ ಮಧುಕರ್, ಚಾರ್ವಕದ ಅಶೋಕ್ ಗೌಡ, ಬಲ್ನಾಡಿನ ಸೀತಾರಾಮ ಗೌಡ, ಆರ್ಯಾಪಿನ ಜಯಂತಿ, ಪಾಣಾಜೆಯ ಹರೀಶ್ ಭಟ್, ಕುಂಬ್ರದ ಭವಾನಿ ಬಿ.ಆರ್, ಬನ್ನೂರಿನ ರಾಧ ರೈ, ಉಪ್ಪಿನಂಗಡಿಯ ಶೋಭ, ಹೊಸಮಠದ ಸೋಮಸುಂದರ್ ಶೆಟ್ಟಿ, ಕೆದಂಬಾಡಿಯ ವಿನಯ ರೈ, ಬಿಳಿನೆಲೆಯ ಪುನೀತ್, ಕಡಬದ ಬಾಲಕೃಷ್ಣ, ಎಡಮಂಗಲದ ರಮೇಶ್ ಬಿ, ಏನೆಕಲ್ಲಿನ ರತನ್, ಸುಬ್ರಹ್ಮಣ್ಯದ ಪ್ರಕಾಶ್, ಆಲಂಕಾರಿನ ಮನೋಹರ್ ಉಪಸ್ಥಿತರಿದ್ದರು. ಸವಣೂರು ಸಹಕಾರ ಸಂಘದ ಸಿಇಓ ಚಂದ್ರಶೇಖರ್ ಪಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾವು ಸಹಕಾರ ಸಂಘದ ಸಿಇಓ ಕೇಶವ ಮೂರ್ತಿ ರವರು ವಂದಿಸಿದರು.


LEAVE A REPLY

Please enter your comment!
Please enter your name here