ಆಲಂಕಾರು ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿ ದೋಷಮುಕ್ತ

0

ಪುತ್ತೂರು: 7 ವರ್ಷದ ಹಿಂದೆ ಆಲಂಕಾರು ಗ್ರಾಮದ ಕಟ್ಟಡವೊಂದರ ಬಳಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

ಪೆರಾಬೆ ಗ್ರಾಮದ ಸುರುಳಿ ನಿವಾಸಿ ಕಿಟ್ಟಣ್ಣ ಗೌಡ ಆರೋಪಿಯಾಗಿದ್ದು, ಅವರು 2017 ಜು.24ರಂದು ಆಲಂಕಾರು ಗ್ರಾಮದ ಕಟ್ಟಡವೊಂದರ ಬಳಿ ಬೈಕ್ ನಿಲ್ಲಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲೆತ್ನಿಸುವ ಸಂದರ್ಭ ಅಬಕಾರಿ ಪೊಲೀಸರು ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಕಿಟ್ಟಣ್ಣ ಗೌಡ ಅವರನ್ನು ದೋಷಮುಕ್ತಗೊಳಿಸಿದೆ. ಆರೋಪಿ ಪರ ವಕೀಲರಾದ ಭಾಸ್ಕರ್ ಕೋಡಿಂಬಾಳ, ಕುಮಾರನಾಥ ಎಸ್ ವಾದಿಸಿದರು.

LEAVE A REPLY

Please enter your comment!
Please enter your name here