ಕಬಡ್ಡಿ ಪಂದ್ಯಾಟ: ಉಪ್ಪಿನಂಗಡಿ ಕಾಲೇಜು ಪ್ರಥಮ

0

ಉಪ್ಪಿನಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಇದರ ಆಶ್ರಯದಲ್ಲಿ ಮೇ.16ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಸರಕಾರಿ ಕಾಲೇಜುಗಳ ಆಹ್ವಾನಿತ ಕಬಡ್ಡಿ ಪಂದ್ಯಾಟದಲ್ಲಿ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.


ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ವಿಜೇತ ಉಪ್ಪಿನಂಗಡಿ ಕಾಲೇಜಿನ ತಂಡ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಹಾಗೂ ಅತಿಥೇಯ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ತಂಡಗಳೊಂದಿಗೆ ಮುನ್ನಡೆಯನ್ನು ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ತಂಡದ ಸಾಹುಲ್ ಸಫ್ರೀಜ್ ಕೂಟದ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ತಂಡದಲ್ಲಿ ಸಂತ್, ರಕ್ಷಿತ್, ಅಕ್ಷಯ್, ಕಾರ್ತಿಕ್, ಸಾಹುಲ್ ಸಫರಿಜ್, ದೇವಿಪ್ರಸಾದ್, ಝೈನ್, ಸಚಿನ್, ಲೋಹಿತ್, ಜಿತೇಶ್ ಆಟಗಾರರಾಗಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here