ಗ್ರಾಮೀಣ ಪ್ರದೇಶದಲ್ಲೊಂದು ಗುಣಮಟ್ಟದ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ-ಬುಶ್ರಾ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಕಾವು

0

ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶವಾದ ಕಾವು ಎಂಬಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳನ್ನೇ ಕೇಂದ್ರೀಕರಿಸಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸುವ ಸಲುವಾಗಿ ಬಲಪಡಿಸಿಕೊಂಡು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯೊಂದಿಗೆ ಒಂದೊಂದೇ ಮೆಟ್ಟಿಲುಗಳನ್ನು ಯಶಸ್ವಿಯಾಗಿ ಏರಿ ಬಂದು 10 ನೇ ತರಗತಿಯವರೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಜ್ಞಾನವನ್ನು ಬೆಳಗಿಸಿ ಅವರ ಭವ್ಯ ಭವಿಷ್ಯಕ್ಕೆ ನಾಂದಿ ಹಾಡುತ್ತಿದೆ.
ಬುಶ್ರಾ ಆಂಗ್ಲ ಮಾಧ್ಯಮ ಪ್ರೈಮರಿ ಮತ್ತು ಪ್ರೌಢ ಶಾಲೆ ಕಾವು ಸುಳ್ಯ ಪುತ್ತೂರು ರಸ್ತೆಯ ಮಧ್ಯಭಾಗದಲ್ಲಿ ಕಾವು ಎಂಬ ಪುಟ್ಟ ಗ್ರಾಮದಲ್ಲಿ ಕಂಗೊಳಿಸುತ್ತಿದೆ.ಬುಶ್ರಾ ವಿದ್ಯಾಸಂಸ್ಥೆಯ ದೂರದೃಷ್ಟಿ, ರಾಷ್ಟ್ರ ಜಾಗೃತಿ, ಪರಿಸರ ಜಾಗೃತಿ ಮತ್ತು ಮಾನವೀಯತೆ ಜಾಗೃತಿಗಳ ಸಹಿತವಾದ ಮನೋಭಾವನೆಗಳೊಂದಿಗೆ ಪರಮೋಚ್ಚ ರಾಷ್ಟ್ರ ಚಿಂತನೆಯೊಂದಿಗೆ ಗೆಳೆಯರನ್ನು ಬೆಳೆಸುವುದಾಗಿದೆ.


ಅತ್ಯಾಧುನಿಕ ಮಾದರಿಯ ಶಾಲೆ
ಆಂಗ್ಲ ಮಾಧ್ಯಮ ಶಾಲೆಯ ಪಠ್ಯಕ್ರಮದೊಂದಿಗೆ ಗುಣಮಟ್ಟದ ಶಿಕ್ಷಣ ವಿಶಿಷ್ಟ ತಂತ್ರಜ್ಞಾನ ಆಧಾರಿತ ತರಗತಿಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ಪೂರಕ ಸೌಕರ್ಯಗಳು, ವಾಹನ ಸೌಲಭ್ಯ, ಆಡಿಯೋ ವಿಡಿಯೋ ಸಂಬಂಧಿತ ತರಗತಿಗಳು, ಪಠ್ಯತರ ಚಟುವಟಿಕೆಗಳು, ಆಟೋಟಕ್ಕೆ ಸಂಬಂಧಿಸಿದ ತರಗತಿಗಳು, ಕರಾಟೆ ತರಗತಿಗಳಂತಹ ಅತ್ಯಾಧುನಿಕ ಶೈಕ್ಷಣಿಕ ಪದ್ಧತಿಗಳನ್ನು ಒಳಗೊಂಡಿದೆ


ಪದವಿ ಪುರಸ್ಕಾರ
ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಹಾಗೂ 10ನೇ ತರಗತಿ ಮುಗಿಸಿ ಹೋಗುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಪ್ರತಿ ವರ್ಷ ಪದವಿ ಪ್ರಧಾನ ಮಾಡಲಾಗುತ್ತದೆ.


ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 100 ಫಲಿತಾಂಶ
2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶವನ್ನು ದಾಖಲಿಸಿದೆ.

ಜನಾಬ್ ಅಬ್ದುಲ್ ಅಜೀಜ್ ಬುಶ್ರಾ ಅವರು ಹುಟ್ಟು ಹಾಕಿದ ಬುಶ್ರಾ ಆಂಗ್ಲ ಮಾಧ್ಯಮ ಶಾಲೆ, ಬೆಳ್ಳಿಹಬ್ಬವನ್ನು ಅತ್ಯಂತ ಸಡಗರ ಸಡಗರದಿಂದ ಕಳೆದ ವರ್ಷವಷ್ಟೇ ಆಚರಿಸಿದೆ. ಪ್ರಸ್ತುತ ಇದೀಗ ಅಬ್ದುಲ್ ಅಜೀಜ್ ಅಧ್ಯಕ್ಷತೆಯಲ್ಲಿ ಬದ್ರುದ್ದಿನ್ ಆಡಳಿತ ನಿರ್ದೇಶಕರಾಗಿ ಮತ್ತು ಪ್ರಸ್ತುತ ದೀಪಿಕಾ ಚಾಕೋಟೆ ಮುಖ್ಯ ಗುರುಗಳಾಗಿ ನುರಿತ ಶಿಕ್ಷಕ ವೃಂದವನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿದೆ

ಬಸ್ ವ್ಯವಸ್ಥೆ:
ಶಾಲೆಯು ಸುಳ್ಯ ಮತ್ತು ಪುತ್ತೂರು ತಾಲೂಕಿನ ಉದ್ದಗಲಕ್ಕೂ ಬಸ್ ವ್ಯವಸ್ಥೆಯನ್ನು ಕಲ್ಪಿಸಿರುತ್ತದೆ. ದೇಲಂಪಾಡಿ,ಸುಳ್ಯ ಪದವು, ಕುಂಬ್ರ ತಿಂಗಳಾಡಿ, ಪಾಲ್ತಾಡು, ಸಂಪ್ಯ, ಪೆರ್ಲoಪಾಡಿ, ನೆಟ್ಟಾರು, ಕನಕಮಜಲು, ಜಾಲ್ಸೂರು, ಅಂಚ್ಚಿನಡ್ಕ, ಪಟ್ಟೆ, ಕೌಡಿಚ್ಚಾ ರು, ಪರ್ಪುಂಜ ಇನ್ನಿತರ ಭಾಗಗಳಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿರುತ್ತದೆ.

ಗ್ರಾಮೀಣ ಪ್ರದೇಶದ ಎಲ್ಲಾ ಮಕ್ಕಳು ಶಿಕ್ಷಣವಂತರಾಗಬೇಕು. ಈಗಾಗಲೇ ಬುಶ್ರಾ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ ತಾಂತ್ರಿಕ ವೃತ್ತಿಪರ ಕ್ಷೇತ್ರಗಳಲ್ಲಿ ದೇಶವಿದೇಶಗಳಲ್ಲಿ ಉದ್ಯೋಗವನ್ನು ಹೊಂದಿರುತ್ತಾರೆ. ಗ್ರಾಮೀಣ ಪ್ರದೇಶದ ಎಲ್ಲಾ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸವನ್ನು ಪಡೆಯಬೇಕೆಂಬುದೇ ನನ್ನ ಆಶಯ.

ಅಬ್ದುಲ್ ಆಜೀಜ್
ಅಧ್ಯಕ್ಷರು
ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು

LEAVE A REPLY

Please enter your comment!
Please enter your name here